ಜು.28 : ಪಂಜಿಗಾರಿನಲ್ಲಿ ಕುಲಾಲ ಸುಧಾರಕ ಸೇವಾ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ

0

ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ವತಿಯಿಂದ ತಾಲೂಕು ಮಟ್ಟದ ಸ್ವಜಾತಿ ಬಾಂಧವರ ಕೆಸರು ಗದ್ದೆ ಕ್ರೀಡಾಕೂಟವು ಜು.28 ರಂದು ಆದಿತ್ಯವಾರ ಪಂಜಿಗಾರಿನಲ್ಲಿ ನಡೆಯಲಿದೆ.


ಪಂಜಿಗಾರು ದಿ.ಅಣ್ಣು ಮೂಲ್ಯರವರ ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆಯಲಿದ್ದು ಸ್ವಜಾತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಮತ್ತು ಕಾರ್ಯದರ್ಶಿ ಧನಂಜಯ ಕುಲಾಲ್ ತಿಳಿಸಿದ್ದಾರೆ.