ಸುಳ್ಯದಲ್ಲಿ ಬೆಳಗ್ಗಿನಿಂದಲೇ ಸುರಿಯುತ್ತಿರುವ ಭಾರಿ ಮಳೆ

0

ರಸ್ತೆ – ಚರಂಡಿಗಳಲ್ಲಿ ನೀರೇ ನೀರು- ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚಳ

ಜಟ್ಟಿಪಳ್ಳ-ಕೊಡಿಯಾಲಬೈಲು ಸೇತುವೆ ಮುಳುಗಡೆಯಾಗುವ ಭೀತಿ

ಸುಳ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸುಳ್ಯ ನಗರದ ಮೂಲಕ ಹಾದುಹೋಗುವ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು,ಜಟ್ಟಿಪಳ್ಳ ಕೊಡಿಯಾಲ ಬೈಲ್ ಹೊಳೆ ಮುಳುಗಡೆಯಾಗುವ ಸನ್ನಿಹ ತಲುಪಿದೆ.ನೀರಿನ ಹರಿವು ಹೆಚ್ಚಿ ಅಕ್ಕಪಕ್ಕದ ತೋಟಗಳು‌ ಸಂಪೂರ್ಣ ಜಲಾವೃತವಾಗಿದೆ.


ಸುಳ್ಯ ನಗರ ಕೆಲವು ಭಾಗಗಳಲ್ಲಿ ಚರಂಡಿ ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಕೆಲವು ಕಡೆ ಚರಂಡಿ ಇಲ್ಲದೇ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಜನರಲ್ಲಿ ಮಳೆಯ ಆತಂಕ ಮೂಡಿದೆ.