ಸಂಪಾಜೆ: ಮಳೆಗಾಲದ ಪ್ರಾಕೃತಿಕ ಮುಂಜಾಗ್ರತಾ ಕ್ರಮಗಳ ಕುರಿತು ಕೆ.ಡಿ.ಪಿ. ಸಭೆ

0

ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ ಕ್ರಮಗಳು, ನಿರಂ ತರವಾಗಿ ಕೈಕೊಡುತ್ತಿರುವ ವಿದ್ಯುತ್, ಮೊಬೈಲ್ ನೆಟ್ವರ್ಕ್ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತಂತೆ ಕೆ.ಡಿ.ಪಿ. ಸಭೆಯು ದ.ಕ. ಸಂಪಾಜೆ ಗ್ರಾಮ ಪಂಚಾಯತಿಯಲ್ಲಿ ಜು.30ರಂದು ನಡೆಯಿತು.


ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಅವರು ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಅರಣ್ಯ, ಮೆಸ್ಕಾಂ, ಕಂದಾಯ, ಆರೋಗ್ಯ, ಶಿಕ್ಷಣ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


ಸಭೆಯಲ್ಲಿ ಗ್ರಾಮದ ವಿದ್ಯುತ್, ಬಿ.ಎಸ್.ಎನ್.ಎಲ್. ನೆಟ್ವರ್ಕ್, ಶಾಲಾ ಗ್ರಂಥಾಲಯ, ಪರಿಶಿಷ್ಟ ಜಾತಿ ಕಾಲನಿಗೆ ಸವಲತ್ತು ವಿತರಣೆಯಲ್ಲಿ ಕೊರತೆ, ಕೃಷಿಕರಿಗೆ ಇಲಾಖೆಯ ವತಿಯಿಂದ ನೀಡುವ ಸವಲತ್ತುಗಳು, ಬೆಳೆವಿಮೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ವೋಲ್ಗಾ ಡಿಸೋಜಾ ,ಗ್ರಾಂ. ಪಂ. ಉಪಾಧ್ಯಕ್ಷ ಎಸ್ ಕೆ ಹನೀಫ್ ಕಲ್ಲುಗುಂಡಿ, ಗ್ರಾಂ ಪಂ. ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಸದಸ್ಯರುಗಳಾದ ಸುಂದರಿ ಮುಂಡಡ್ಕ, ಜಗದೀಶ್ ರೈ. ,ವಿಮಲಾ ಪ್ರಸಾದ್ , ಲಿಸ್ಸಿ ಮೊನಾಲಿಸಾ, ಅನುಪಮ, ಶೌವಾದ್ ಗೂನಡ್ಕ, ವಿಮಲಾ, ಸುಶೀಲಾ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್, ಎಸ್. ಸಿ ಡಿ . ಸಿ. ಸಿ ಬ್ಯಾಂಕ್ ವ್ಯವಸ್ಥಾಪಕಿ ಸುಲೋಚನಾ, ಪಶುವೈದ್ಯ ಮತ್ತು ಪಶುಪಾಲನಾ
ಇಲಾಖಾಧಿಕಾರಿ ಬಾಲಕೃಷ್ಣ, ಉಪವಲಯ ಅರಣ್ಯಾಧಿಕಾರಿ ಕರಣಿ ಮಟ್ ,ಸಮಾಜ ಕಲ್ಯಾಣ ಇಲಾಖೆ ಪ್ರವೀಣ್ , ಮೆಸ್ಕಾಂ ಇಲಾಖೆಯ ಅಭಿಷೇಕ್, ಕೃಷಿ ಇಲಾಖೆ ನಂದಿತಾ , ಆರೋಗ್ಯ ಇಲಾಖೆ ,ಕಂದಾಯ ಇಲಾಖೆ , ಮತ್ತು ಇತರೆ ಇಲಾಖೆಯು ಅಧಿಕಾರಿಗಳು ಮತ್ತು ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.