ಪೈಚಾರು: ಅಟೋರಿಕ್ಷಾ ತಂಗುದಾಣದ ಬಳಿ ಅಪಾಯಕಾರಿ ಮರ

0

ಪೈಚಾರು ಅಟೋರಿಕ್ಷಾ ತಂಗುದಾಣದ ಪಕ್ಕದ ಬರೆಯಲ್ಲಿ ಮರವೊಂದು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ತೆರವುಗೊಳಿಸುವಂತೆ ಅಟೋರಿಕ್ಷಾ ಚಾಲಕರು ವಿನಂತಿಸಿಕೊಂಡಿದ್ದಾರೆ.

ಅಟೋರಿಕ್ಷಾ ತಂಗುದಾಣದ ಬಳಿ ಬರೆ ಜರಿದಿದ್ದು, ಮರ ಬರೆಯ ಬದಿಯಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ. ಅರಣ್ಯ ಇಲಾಖೆಯವರು ಇದರತ್ತ ಗಮನಹರಿಸಬೇಕಾಗಿದೆ.