ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ಪ್ರಪ್ರಥಮ ಬಾರಿಗೆ ಶ್ರೀವರಮಹಾಲಕ್ಷ್ಮೀ ಪೂಜೆಯನ್ನು ಆ.೧೬ರಂದು ಏರ್ಪಡಿಸಿದ್ದು, ಈ ಕುರಿತು ಆ.೧ರಂದು ಸುಳ್ಯ ನಗರ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಹರ್ಷಾ ಕರುಣಾಕರರ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಹಾಗೂ ಭಕ್ತಾಧಿಗಳ ಸಭೆಯನ್ನು ಎಂ.ಜಿ.ಎಂ. ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಸುಳ್ಯ ನಗರ ಗೌಡ ಮಹಿಳಾ ಘಟಕ ಮತ್ತು ಶ್ರೀ ವರಲಕ್ಷ್ಮಿ ಯುವತಿ ಮಂಡಲ ಕೊಡಿಯಾಲಬೈಲು ಹಾಗೂ ಪೋಷಕರ ಸಮಿತಿ ಎಂ.ಜಿ.ಎಂ. ಶಿಕ್ಷಣ ಸಂಸ್ಥೆಗಳು ಹಾಗೂ ಶ್ರೀ ಮಹಾಮ್ಮಾಯಿ ಸೇವಾ ಸಮಿತಿ ಕೊಡಿಯಾಲಬೈಲು ಜಂಟಿ ಸಹಯೋಗದಲ್ಲಿ ನಡೆಯಲಿದೆ.
ಸಮಿತಿ : ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು, ಉಪಾಧ್ಯಕ್ಷರಾಗಿ ಶ್ರೀಮತಿ ಶಾರದಾ ಎನ್. ರಾವ್, ಕಾರ್ಯದರ್ಶಿ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ, ಕೋಶಾಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ಕೊಡಿಯಾಲಬೈಲು, ಸಂಯೋಜಕಿ ಶ್ರೀಮತಿ ಲತಾಪ್ರಸಾದ್ ಕುದ್ಪಾಜೆ, ಜತೆ ಕಾರ್ಯದರ್ಶಿ ಶ್ರೀಮತಿ ಜಯಮಾಲ ಕುದ್ಪಾಜೆ, ಸಂಘಟನಾ ಕಾರ್ಯದರ್ಶಿ ಜಯಂತಿ ಕೆ.ವಿ., ಪದ್ಮಾವತಿ ಕೊಡಿಯಾಲಬೈಲು, ಸದಸ್ಯರುಗಳಾಗಿ ಹರ್ಷ ಕರುಣಾಕರ, ಮಮತಾ ಕುದ್ಪಾಜೆ, ವಿದ್ಯಾಶ್ರೀ, ಶ್ವೇತಾ ಅಮೈ, ಕವಿತ ಪಾನತ್ತಿಲ, ಜಯಶೀಲ ಪಾನತ್ತಿಲ, ನಮೃತ ನಟರಾಜ ಶರ್ಮ, ನಳಿನಾಕ್ಷಿ ಸೀತಾನಂದ, ಅರ್ಚನ ಮಧುಕಿರಣ, ಶ್ವೇತ ಕೆ.ಎಸ್, ಸೌಮ್ಯ ವಿನೋದ್, ಭಾಗ್ಯಶ್ರೀ, ಪ್ರೇಮಾ ವಿನಯಚಂದ್ರ, ನಳಿನಿ ಕೆ.ಎಸ್., ಸುಶೀಲ ಚಂದ್ರಶೇಖರ, ಲತಾ ಚಂದ್ರಹಾಸ, ಯಶೋದ ಬಿ.ಸಿ., ಅನಿತಾ ರಾಧಾಕೃಷ್ಣ, ಗೌರವ ಸಲಹೆಗಾರರಾಗಿ ಪಿ.ಎಸ್. ಗಂಗಾಧರ್, ರಾಧಾಕೃಷ್ಣ ಮಾಣಿಬೆಟ್ಟು, ದೊಡ್ಡಣ್ಣ ಬರೆಮೇಲು, ಹರೀಶ್ ರೈ ಉಬರಡ್ಕ, ನಾರಾಯಣ ರಾವ್ ಅನ್ನಪೂರ್ಣ, ದಿನೇಶ್ ಮಡಪ್ಪಾಡಿ, ಸೀತಾನಂದ ಬೇರ್ಪಡ್ಕ, ಹೆಚ್.ಎಂ. ಸುರೇಶ್ ಅಮೈ, ಇಂದಿರಾ ರಘುರಾಮ ಮಾಣಿಬೆಟ್ಟು, ಮಮತಾ ಕುದ್ಪಾಜೆ, ಪ್ರಭಾಕರ ಅಮೈ, ಎಂ.ಪಿ.ಶಿವರಾಮ, ದಿಲೀಪ್ ಕೆ.ಎಲ್. ಕೊಡಿಯಾಲಬೈಲು, ಭೋಜಪ್ಪ ಗೌಡ ಮಾಣಿಬೆಟ್ಟು, ಹರಿಪ್ರಸಾದ್ ಪಾನತ್ತಿಲ, ರಾಧಾಕೃಷ್ಣ ಬೇರ್ಪಡ್ಕ ಆಯ್ಕೆಯಾದರು.