ಆಲೆಟ್ಟಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ 2 ನೇ ವರುಷದ ಮೊಸರು ಕುಡಿಕೆ ಉತ್ಸವವು ಸೆ.1 ರಂದು ಆಲೆಟ್ಟಿಯಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆಯು ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಆ.4 ರಂದು ನಡೆಯಿತು.


ದೇವಸ್ಥಾನದ ಅರ್ಚಕ ಹರ್ಷಿತ್ ಬನ್ನಿಂತಾಯ ಪ್ರಾರ್ಥನೆ ನೆರವೇರಿಸಿದರು. ದೇವಸ್ಥಾನದ ವ್ಯ.ಸ.ಅಧ್ಯಕ್ಷ ತೀರ್ಥ ಕುಮಾರ್ ಕುಂಚಡ್ಕ, ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ವೀಣಾ ಆಲೆಟ್ಟಿ ಯವರು ಆಮಂತ್ರಣ ಬಿಡುಗಡೆಗೊಳಿಸಿದರು.


ಉತ್ಸವ ಸಮಿತಿ ಅಧ್ಯಕ್ಷ ಉದಯ ಕುಡೆಕಲ್ಲು, ವ್ಯ.ಸಮಿತಿ ಸದಸ್ಯರಾದ ಅಚ್ಚುತ ಮಣಿಯಾಣಿ ಆಲೆಟ್ಟಿ, ಸತೀಶ್ ಕುಂಭಕೋಡು, ಮಮತ ನಾರ್ಕೋಡು, ನಳಿನಿ ರೈ ಆಲೆಟ್ಟಿ, ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ತೀರ್ಥ ಕುಮಾರ್ ವಾಲ್ತಾಜೆ, ಗೌರವಾಧ್ಯಕ್ಷ ನಿತಿನ್ ಗುಂಡ್ಯ, ಆಲೆಟ್ಟಿ ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ಸ್ಥಳೀಯರಾದ ಶ್ರೀನಾಥ್ ಆಲೆಟ್ಟಿ, ಗಗನ್ ಬೈಪಡಿತ್ತಾಯ, ಸುರೇಶ್ ಆಲೆಟ್ಟಿ, ಹರಿಪ್ರಸಾದ್ ಗುಂಡ್ಯ, ನಾರಾಯಣ ರೈ ಆಲೆಟ್ಟಿ, ಪ್ರಶಾಂತ್ ಕೋಲ್ಚಾರು, ನಾಗರಾಜ ಬಡ್ಡಡ್ಕ,ಸತೀಶ್ ಕುಲಾಲ್,ರೋಹಿತ್ ಕುಡೆಕಲ್ಲು,ಅಜಿತ್ ಗುಂಡ್ಯ, ವಿಷ್ಣುಪ್ರಸಾದ್ ಗುಂಡ್ಯ,ರೂಪಾನಂದ ಗುಂಡ್ಯ ಮತ್ತಿತರರು ಉಪಸ್ಥಿತರಿದ್ದರು.