ಸಂಪಾಜೆ: ಕಲ್ಲುಗುಂಡಿ ಕೂಲಿಶೆಡ್ ಬಳಿ ರಸ್ತೆಯಲ್ಲಿ ಗುಂಡಿ ಹಿನ್ನೆಲೆ

0

ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೂಲಿಶೆಡ್ ಬಳಿ ಮುಖ್ಯರಸ್ತೆಯ ಅಲ್ಲಲ್ಲಿ ಗುಂಡಿ ನಿರ್ಮಾಣವಾಗಿದ್ದು, ಕೂಲಿಶೆಡ್ ನ ಭಾರತ್ ಪೈಂಟ್ ಮತ್ತು ಹಾರ್ಡ್ ವೇರ್ ಮಾಲಕರಾದ ಕಿಫಾಯತ್ತುಲ್ಲಾ ಅವರು ತಮ್ಮ ಸ್ವಂತ ಖರ್ಚಿನಿಂದ ಸ್ನೇಹಿತರ ಸಹಕಾರದೊಂದಿಗೆ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ಮುಚ್ಚಿದ ಘಟನೆ ಆ.4ರಂದು ವರದಿಯಾಗಿದೆ.

ಕೂಲಿಶೆಡ್ ಬಳಿ ಮುಖ್ಯರಸ್ತೆಯಲ್ಲಿ ಗುಂಡಿಯಾಗಿ ವಾಹನ ಸವಾರರಿಗೆ ಸಂಕಷ್ಟವಾಗುತ್ತಿರುವುದನ್ನು ಗಮನಿಸಿದ ಕಿಫಾಯತ್ತುಲ್ಲ ಅವರು ಸಿಮೆಂಟ್, ಜಲ್ಲಿ, ಹೊಯಿಗೆ ಮೂಲಕ ಗುಂಡಿಯನ್ನು ಕಾಂಕ್ರೀಟ್ ಹಾಕಿ ಮುಚ್ವಿದ್ದಾರೆ. ಕಳೆದ ವರ್ಷವೂ ಇದೇ ಸ್ಥಳದಲ್ಲಿ ನಿರ್ಮಾಣಗೊಂಡಿದ್ದ ಗುಂಡಿಗೆ ಕಿಫಾಯತ್ತುಲ್ಲಾ ಮತ್ತು ಸ್ನೇಹಿತರು ಸೇರಿ ಕಾಂಕ್ರೀಟ್ ಹಾಕಿ ಮುಚ್ಚಿದ್ದರು.

ಈ ಸಂದರ್ಭದಲ್ಲಿ ಮಹಮ್ಮದ್ ಕುಂಞಿ ಕಲ್ಲುಗುಂಡಿ, ಇಸ್ಮಾಯಿಲ್ ಕಲ್ಲುಗುಂಡಿ, ಅಕ್ಷಯ್, ಸಂಜು ಮತ್ತು ಸ್ಥಳೀಯರು ಸಹಕರಿಸಿದ್ದರು‌.