ಗೂನಡ್ಕ ಪೆಲ್ತಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿ

0

ಚಾಲಕ ಹಾಗೂ ಸಹ ಪ್ರಯಾಣಿಕನಿಗೆ ಸಣ್ಣ ಪುಟ್ಟ ಗಾಯ, ಆಸ್ಪತ್ರೆಗೆ ದಾಖಲು

ಮಾಣಿ ಮೈಸೂರು ಹೆದ್ದಾರಿ ಗೂನಡ್ಕ ಪೆಲ್ತಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿಯಾಗಿ ಚಾಲಕ ಮತ್ತು ಸಹ ಪ್ರಯಾಣಿಕ ನಿಗೆ ಸಣ್ಣ ಪುಟ್ಟ ಗಾಯವಾದ ಘಟನೆ ಆ. 4 ರಂದು ತಡ ರಾತ್ರಿ ಸಂಭವಿಸಿದೆ.

ಪಿರಿಯಾಪಟ್ಟಣ
ದಿಂದ ತರಕಾರಿ ಹೊತ್ತುಕೊಂಡು ಸುಳ್ಯ ಕಡೆಗೆ ಬರುತ್ತಿದ್ದ ಗೂಡ್ಸ್ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಯಾಗಿ ರಸ್ತೆಯ ಬದಿ ಬಿದ್ದಿದೆ.

ಘಟನೆಯಿಂದ ಪಿಕಪ್ ಚಾಲಕ ಹುಣಸೂರು ಮೂಲದ ಮೋಹನ್‌ ಹಾಗೂ ಸಹಾಯಕ ನಿಗೆ ಗಾಯಗಳಾಗಿದ್ದು, ಅವರನ್ನು ಸಂಪಾಜೆಯ ಟರ್ಲಿ ಅಂಬ್ಯುಲೆನ್ಸ್ ಮೂಲಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.