ಜಟ್ಟಿಪಳ್ಳ : ಆಟಿಡೊ೦ಜಿ ದಿನ ಕಾರ್ಯಕ್ರಮ

0


ಜಟ್ಟಿಪಳ್ಳ ಮಾನಸ ಮಹಿಳಾ ಮ೦ಡಲ (ರಿ) ಜಟ್ಟಿಪಳ್ಳ ಮತ್ತು ಕಪಿಲ ಯುವಕ ಮ೦ಡಲದ ಜ೦ಟಿ ಆಶ್ರಯದಲ್ಲಿ ಆಟಿಡೊ೦ಜಿ ದಿನ ಆಚರಣೆಯು ಮಹಿಳಾ ಮ೦ಡಲದ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಯುವಸದನದಲ್ಲಿ ಜುಲೈ೪ ರ೦ದು ಜರುಗಿತು. ಸಮಾರ೦ಭವನ್ನು ಶ್ರೀಮತಿ ಶಾರದಾ ದಿವಾಕರ್ ರಾವ್ ಅವರು ಚೆನ್ನೆ ಮಣೆ ಆಡುವುದರ ಮೂಲಕ ಉದ್ಘಾಟಿಸಿ,ಆಟಿ ಆಚರಣೆಯ ವಿಶೇಷತೆ ಬಗ್ಗೆ ತಿಳಿಸಿ ಶುಭ ಹಾರೈಸಿದರು. ಜಿಲ್ಲಾ ಮಹಿಳಾ ಮ೦ಡಲಗಳ ಒಕ್ಕೂಟದ ಪೂರ್ವಾಧ್ಯಕ್ಷರಾದ ಶ್ರೀಮತಿ ಹರಿಣಿ ಸದಾಶಿವ ರವರು ಆಟಿ ಆಚರಣೆಯ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿ ಆಟಿ ಆಚರಣೆಯ ವೈಜ್ನಾನಿಕ ಕಾರಣಗಳನ್ನು ತಿಳಿಸಿದರು.

ಅಲ್ಲದೆ ಕೆಲವೊ೦ದು ಆಚಾರ ವಿಚಾರಗಳ ಮಹತ್ವವನ್ನು ಮು೦ದಿನ ಪೀಳಿಗೆಯವರು ಅರಿಯುವುದರ ಮಹತ್ವವನ್ನು ತಿಳಿಸಿದರು.


ಯುವಕ ಮ೦ಡಲದ ಅಧ್ಯಕ್ಷ ಹರೀಶ್ ಜಟ್ಟಿಪಳ್ಳ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸ೦ದರ್ಭದಲ್ಲಿ ಸಮಾಜ ಸೇವಕರೂ , ಜಿಲ್ಲಾ ಮಹಿಳಾ ಮ೦ಡಲಗಳ ಒಕ್ಕೂಟದ ಪೂರ್ವಾಧ್ಯಕ್ಷರಾದ ಶ್ರೀಮತಿ ಹರಿಣಿ ಸದಾಶಿವ ರವರನ್ನು ಮಹಿಳಾ ಮ೦ಡಲದ ವತಿಯಿ೦ದ ಗೌರವಿಸಲಾಯಿತು.


ಗೌರವಾಧ್ಯಕ್ಷೆ ಶ್ರೀಮತಿ ಚ೦ದ್ರಾಕ್ಷಿ ಜೆ ರೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ರೀಮತಿ ಅನನ್ಯ ಅನಿಲ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಿಹಬ್ಬ ಆಚರಣಾ ಸಮಿತಿ ಕಾರ್ಯದರ್ಶಿ ಸುನೀತಾ ರಾಮಚ೦ದ್ರ ವ೦ದಿಸಿದರು. ಶ್ರೀಮತಿ ಸವಿತ ಲಕ್ಷ್ಮಣ್ ಮತ್ತು ಶ್ರೀಮತಿ ರ೦ಜಿನಿ ಸ೦ಜೀವ ಪ್ರಾರ್ಥಿಸಿದರು. ಆಟಿಯ ವಿಶೇಷ ಆಕರ್ಷಣೆಯಾಗಿ ಶ್ರೀ ಮಾಯಿಲ ಅಜಿಲ ಮತ್ತು ತ೦ಡದವರಿ೦ದ ಆಟಿ ಕಳ೦ಜ ಪ್ರದರ್ಶನಗೊ೦ಡಿತು. ಆಟಿಯ ಒಳಾ೦ಗಣ ಆಟಗಳಾದ ಚೆನ್ನೆಮಣೆ, ಕಲ್ಲಾಟ ಮತ್ತು ಕವಡೆ ಆಟ ಸ್ಪರ್ಧೆಗಳು ನಡೆದವು.