ಕೊಯನಾಡು ಸ.ಹಿ.ಪ್ರಾ.ಶಾಲಾ ನೂತನ ಎಸ್.ಡಿ.ಎಂ.ಸಿ. ರಚನೆ

0

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚನೆಯಾಯಿತು.

ನೂತನ ಅಧ್ಯಕ್ಷರಾಗಿ ಪುರುಷೋತ್ತಮ ಬಿಸಿಲುಮನೆ, ಉಪಾಧ್ಯಕ್ಷ್ಯರಾಗಿ ಶ್ರೀಮತಿ ಆಶಾ ಕೆ. ಎಂ, ಆಯ್ಕೆಯಾದರು.

ಸದಸ್ಯರುಗಳಾಗಿ ಉಮೇಶ್ ಕೆ ಬಿ, ಕುಸುಮಾಕರ ನಿಡಿಂಜಿ, ಹನೀಫ್ ಎಸ್ ಪಿ, ಲೋಕೇಶ್, ನಿರಂಜನ್ ಕಲ್ಲಾಳ, ಸಂಶುದ್ದೀನ್, ನಳಿನಾಕ್ಷ ಗುಡ್ಡೆಗದ್ದೆ, ಸುಮಲತಾ, ಚಂದ್ರಮತಿ, ಲಕ್ಷ್ಮಿ, ಭವ್ಯ, ದಿವ್ಯ, ಸಾಜು, ಉಮೈಮತ್, ಕುಶಲ, ನಾಗವೇಣಿ ಆಯ್ಕೆಯಾದರು.

ನಿಕಟ ಪೂರ್ವ ಅಧ್ಯಕ್ಷರಾದ ನವೀನ್ ಕುಮಾರ್, ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ, ಶಾಲಾ ಮುಖ್ಯೋಪಾಧ್ಯಾಯಿನಿ ವನಿತಾಮಣಿ, ಅತಿಥಿ ಶಿಕ್ಷಕರುಗಳಾದ ನವ್ಯ, ಪುರುಷೋತ್ತಮ ಉಪಸ್ಥಿತರಿದ್ದರು.