ಆ.17 – ಸೆ.14: ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸೋಣ ಶನಿವಾರ ಬಲಿವಾಡುಕೂಟ

0

ಸುಳ್ಯ ನಗರದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸೋಣ ಶನಿವಾರ ಬಲಿವಾಡುಕೂಟ ಕಾರ್ಯಕ್ರಮವು ಆ.17ರಿಂದ ಸೆ.14ರವರೆಗೆ ನಡೆಯಲಿದೆ.

ಸೋಣ ಶನಿವಾರದ ಪ್ರಯುಕ್ತ ಶ್ರೀದೇವರಿಗೆ ವಿಶೇಷ ಮಹಾಪೂಜೆ ನಡೆಯಲಿದೆ. ಆ.17ರಂದು ಫಲ ಪಂಚಾಮೃತ ಅಭಿಷೇಕ ಸೇವೆ, ಆ
24ರಂದು ಪವಮಾನಭಿಷೇಕ, ಆ.31ರಂದು ಫಲ ಪಂಚಾಮೃತ ಸಹಿತ ವಿಷ್ಣು ಸಹಸ್ರನಾಮಾರ್ಚನೆ, ಸೆ.7ರಂದು ದೇವರಿಗೆ ವಿಶೇಷ ಅಲಂಕಾರ ಪೂಜೆ, ಗಣೇಶ ಚೌತಿ ಪ್ರಯುಕ್ತ ಗಣಪತಿ ಹೋಮ, ಸೆ.14ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಶ್ರೀ ದೇವರಿಗೆ ವಿಶೇಷ ತುಳಸಿ ಅರ್ಚನೆ ನಡೆಯಲಿದೆ.