ಸುಳ್ಯದ ಸಾಂದೀಪ್ ವಿಶೇಷಮಕ್ಕಳ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮ ಹಾಗೂ ವಿಶೇಷ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕರನ್ನು ಗೌರವಿಸುವ ಕಾರ್ಯಕ್ರಮ ಎಂ ಬಿ ಫೌಂಡೆಶನ್ ಮತ್ತು ಸಿಟಿ ಫ್ರೆಂಡ್ಸ್ & ಆರ್ಟ್ಸ್ ಕ್ಲಬ್ ಜಟ್ಟಿಪಳ್ಳ ಇದರ ಸಹಕಾರದೊಂದಿಗೆ ಅ.15 ರಂದು ಸಾಂದೀಪ್ ವಿಶೇಷ ಮಕ್ಕಳ ಶಾಲೆ ಸಭಾಂಗಣದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ರವರು ವಹಿಸಲಿದ್ದಾರೆ.
ಸುಳ್ಯ ತಹಶೀಲ್ದಾರಾದ ಮಂಜುನಾಥ್ ರವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾಂದೀಪ್ ಶಾಲೆಯ ವಿಶೇಷ ಮಕ್ಕಳಿಗೆ ಬಹುಮಾನವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ. ಡಿ.ವಿ. ಲೀಲಾಧರ್ ರವರು ವಿತರಿಸಲಿದ್ದಾರೆ.
ಸುಳ್ಯ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿ ಶ್ರೀಮತಿ.ಸೈಲಜಾ, ಯುಎಇ ಯ ಅರ್ಲಾ ಪುಡ್ಸ್ ಕಂಪೆನಿ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಬಶೀರ್, ಸಂಸ್ಕೃತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಜಯರಾಮ ಬೊಳಿಯಮಜಲು,ಜಟ್ಟಿಪಳ್ಳ ಸಿಎಫ್ಸಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್(ಪಿಕೆ),ಮತ್ತು ಅಬ್ದುಲ್ ರಜಾಕ್ (ಪ್ರಗತಿ ಅಚ್ಚು), ಸರ್ಕಾರಿ ಆಸ್ಪತ್ರೆ ಆರೋಗ್ಯ ಸಮಿತಿ ಸದಸ್ಯರು ಸಮಾಜಸೇವಕರಾದ ಅಬ್ದುಲ್ ರಜಾಕ್ (ಅಚ್ಚು ಪ್ರಗತಿ)ಯವರು ಅತಿಥಿಗಳಾಗಿ ಬಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಹರಿಣಿ ಸದಾಶಿವ ಹಾಗೂ ಎಂ ಬಿ ಫೌಂಡೇಶನ್ ಟ್ರಸ್ಟಿ ಕಾರ್ಯಕ್ರಮ ಸಂಯೋಜಕರಾದ ಶರೀಫ್ ಜಟ್ಟಿಪಳ್ಳ ತಿಳಿಸಿದ್ದಾರೆ.