ಜಾಲ್ಸೂರು: ಮಹಾಬಲಡ್ಕ ಕಾಂಪ್ಲೆಕ್ಸ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಜಾಲ್ಸೂರಿನ ಮಹಾಬಲಡ್ಕ ಕಾಂಪ್ಲೆಕ್ಸ್ ನಲ್ಲಿ ಸ್ವಾತಂತ್ರ್ಯೋತ್ಸವವನ್ನು ಆ.15ರಂದು ಆಚರಿಸಲಾಯಿತು.

ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಯು.ಪಿ. ಕುಸುಮಾವತಿ ಅವರು ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮಹಾಬಲಡ್ಕ ಕಾಂಪ್ಲೆಕ್ಸ್ ವರ್ತಕರುಗಳಾದ ನಂದ ಕಿಶೋರ್ ಬನಾರಿ, ಶ್ರೀವತ್ಸ ಕಾಟೂರು, ನಾರ್ಣಪ್ಪ ಟೈಲರ್,
ರೋಹಿತ್, ಶಿವರಾಂ ಮಣಿಯಾಣಿ, ಹರೀಶ್ ಪಾಟಾಳಿ ಮಹಾಬಲಡ್ಕ, ಯಶ್ವಿತ್, ನೇತ್ರಾವತಿ, ಲತಾ, ಭವ್ಯಶ್ರೀ, ಉಮೇಶ್. ಪಿ.. ಜಿ. ಗೋಪಾಲ, ಜಾಲ್ಸೂರು ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಸಿಬ್ಬಂದಿಗಳು ಜಾಲ್ಸೂರಿನ ವರ್ತಕರುಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು. ಶ್ಯಾಮಕುಮಾರ್ ಬೆನಕ ಕಾರ್ಯಕ್ರಮ ನಿರೂಪಿಸಿದರು.