ಜಟ್ಟಿಪಳ್ಳ ಮದ್ರಸ ಸಂಭ್ರಮದ ಸ್ವಾತಂತ್ರ್ಯೋತ್ಸವ ದಿನಾಚರಣೆ

0

ಹಯಾತುಲ್ ಇಸ್ಲಾಂ ಕಮಿಟಿ ರಿ.ಜಟ್ಟಿಪಳ್ಳ ಬುಸ್ತಾನುಲ್ ಉಲೂಂ ಮದ್ರಸ ಇದರ ವತಿಯಿಂದ ಭವ್ಯ ಭಾರತರದ ಎಪ್ಪತ್ತೆಂಟನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಮಿಟಿ ಅಧ್ಯಕ್ಷ ಬಶೀರ್ ಬಾಳಮಕ್ಕಿ ಹಾಗೂ ಗೌರವಧ್ಯಕ್ಷ ಅಬೂಭಕ್ಕರ್ ರವರು ಧ್ವಜಾರೋಹಣ ನೇರವೇರಿಸಿದರು ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ಶುಭ ಹಾರೈಸಿದರು.


ವಿದ್ಯಾರ್ಥಿಗಳು ರಾಷ್ಟ್ರ ಗೀತೆ , ದೇಶ ಭಕ್ತಿ ಗೀತೆ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಸಿದರು.


ಮುಖ್ಯೋಪಾದ್ಯಾಯ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವರು ಸ್ವಾತಂತ್ರ್ಯ ಸಂದೇಶ ಭಾಷಣಗೈದು ಸರ್ವಧರ್ಮ ಮಹನೀಯರ ಒಗ್ಗಟ್ಟಿನ ಸಮರದ ಫಲವಾಗಿದೆ ನಮ್ಮ ದೇಶದ ಸ್ವಾತಂತ್ರ್ಯ.


ದೇಶ ಪ್ರೇಮ ವಿಶ್ವಾಸಿಯ ಮುಖ್ಯ ಗುಣ.ಶಾಂತಿ ಸೌಹಾರ್ಧತೆ,ಸಹಿಷ್ಣುತೆಯೊಂದಿಗೆ ನಾವೆಲ್ಲರೂ ಒಟ್ಟಾಗಿ ಬಾಳೋಣ.ಕಷ್ಟದಲ್ಲಿರುವವರಿಗೆ ನೆರವಾಗಿ ಮನುಷ್ಯತ್ವಕ್ಕೆ ಬೆಲೆ ಕಟ್ಟೋಣವೆಂದರು.ಹಸಿದವನ ಜಾತಿ ನೋಡಿ ಅನ್ನ ನೀಡುವುದು ಮನುಷ್ಯತ್ವವಲ್ಲ.


ನಾಡಿನ ಕ್ಷೇಮಾಭಿವೃದ್ಧಿಯಲ್ಲಿ ಸರ್ವರೂ ಕೈ ಜೋಡಿಸಬೇಕೆಂದು ಸಲಹೆ ನೀಡಿದರು.ಸಹಾದ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿಯವರು ಪ್ರತಿಜ್ಞಾ ವಿಧಿ ಭೋದಿಸಿದರು.ಸ್ವಾತಂತ್ರ್ಯ ಪ್ರಯುಕ್ತ ಈ ಮೊದಲು ಹಮ್ಮಿಕೊಂಡ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಹಾಜಿ ಅಬೂಭಕ್ಕರ್ ವಿ.ಕೆ,ಹಾಜಿ ಕೆ ಎಂ ಮೂಸ,ಶರೀಫ್ ಜಟ್ಟಿಪಳ್ಳ, ಜಲಾಲೀಯ್ಯ ಉಸ್ತುವಾರಿ ತಾಜುದ್ದೀನ್ ಎಂ ಎಸ್,ಪ್ರಧಾನ ಕಾರ್ಯದರ್ಶಿ ಪೈಸಲ್ ,ಸರಕಾರಿ ಅಸ್ಪತ್ರೆ ರಕ್ಷಾ ಸಮಿತಿ ಅಚ್ಚು ಪ್ರಗತಿ ಮೊದಲಾದವರು ಉಪಸ್ಥಿತರಿದ್ದರು
.