ಕಲ್ಲುಗುಂಡಿ ಆರ್‌.ಎಂ.ಎಸ್ .ಎ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

0

ಕಲ್ಲುಗುಂಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆರ್‌.ಎಂ.ಎಸ್ .ಎ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣವನ್ನು ಪ್ರಾಥಮಿಕ ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ಹನೀಫ್ ನಿರ್ವಹಿಸಿದರು. ಸಂಪಾಜೆ ಗ್ರಾ.ಪಂ ಅಧ್ಯಕ್ಷೆ ಸುಮತಿ ಶಕ್ತಿ ವೇಲು, ಉಪಾಧ್ಯಕ್ಷ ಎಸ್. ಕೆ ಹನೀಫ್, ಸಂಪಾಜೆಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿoಗಾಜೆ, ಗ್ರಾ.ಪಂ ಸದಸ್ಯ ಜಗದೀಶ್ ರೈ, ಯಮುನಾ ,ಸುಂದರಿ ಮುಂಡಡ್ಕ, ರಜನಿ ಶರತ್, ಪ್ರಾಥಮಿಕ ವಿಭಾಗದ ಮುಖ್ಯಪಾಧ್ಯಾಯರು ಚಂದ್ರಾವತಿ, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯರು ಜಯಶ್ರೀ, ಮುಖ್ಯ ಶಿಕ್ಷಕರುಗಳು, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿ ವೃಂದ, ಗ್ರಾಮಸ್ಥರು ಉಪಸ್ಥಿತರಿದ್ದರು.