ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

0

ಕುಕ್ಕೆಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ಹಾಗೂ ಐ ಕ್ಯೂ ಎ ಸಿ ಸಹಯೋಗದೊಂದಿಗೆ ಇತಿಹಾಸ ವಿಭಾಗದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆ.14 ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾl ದಿನೇಶ್ ಪಿ. ಟಿ ಇವರು ವಹಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಶ ಸಮ್ಯಕ್ತ್ ಜೈನ್ ಇವರು ಆಟಿಯ ವಿಶೇಷತೆಯ ಬಗ್ಗೆ ಉಪನ್ಯಾಸವನ್ನು ನೀಡಿದರು. ಆಟಿ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು . ಐ ಕ್ಯೂ ಎ ಸಿ ಘಟಕದ ಸಂಯೋಜಕರಾದ ಲತಾ ಬಿ.ಟಿ ಇವರು ಉಪಸ್ಥಿತರಿದ್ದರು.

ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸಾದ್ ಎನ್ ಸ್ವಾಗತಿಸಿದರು.

ಇತಿಹಾಸ ವಿಭಾಗದ ಉಪನ್ಯಾಸಕಿ ನಮಿತಾ.ಎಂ ಎ ವಂದಿಸಿದರು. ಕು.ಕಲ್ಪನಾ. ವೈ ಕಾರ್ಯಕ್ರಮ ನಿರೂಪಿಸಿದರು.