ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಸ್ವಾತಂತ್ರ್ಯೊತ್ಸವದ ಸಂಭ್ರಮ

0

ಸುಳ್ಯ ಸೈಂಟ್ ಬ್ರಿಜಿಡ್ಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮ ಸೈಂಟ್ ಬ್ರಿಜಿಡ್ಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಿತು
ಸ್ವಾತಂತ್ರ್ಯೊತ್ಸವದ ಧ್ವಜಾರೋಹಣವನ್ನು ಮಂಗಳೂರು ಕೆಥೊಲಿಕ್ ಎಜುಕೇಶನ್ ಬೋರ್ಡ್ ಇದರ ಕಾರ್ಯದರ್ಶಿಗಳಾದ ರೆ.ಪಾ ಡಾ.ಪ್ರವೀಣ್ ಲೀಯೋ ನೆರವೇರಿಸಿದರು.

ಶಾಲಾ ಸಂಚಾಲಕರಾದ ರೆ.ಪಾ ವಿಕ್ಟರ್ ಡಿಸೋಜ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ ಭೂಸೇನೆ ಯೋದ ಚೆನ್ನಪ್ಪ ಗೌಡ ಅತ್ಯಾಡಿ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ನಗರ ಪಂಚಾಯತ್ ಸದಸ್ಯರಾದ ಡೇವಿಡ್ ದೀರಾ ಕ್ರಾಸ್ತ,ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ, ಪೊಷಕ ಸಮಿತಿ ಉಪಾಧ್ಯಕ್ಷ ಸಿ.ಕೆ ನವೀನ್ ಚಂದ್ರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮುಖ್ಯ ಶಿಕ್ಷಕಿ ಸಿಸ್ಟರ್ ಆಂತೋನಿ ಮೇರಿ ಸ್ವಾಗತಿಸಿದರು.ಶಿಕ್ಷಕಿ ವತ್ಸ ಕಾರ್ಯಕ್ರಮ ನಿರೂಪಿಸಿದರು.


ಶಿಕ್ಷಕ ಉಮೇಶ್ ಪಂಜದ ಬೈಲು ವಂದನಾರ್ಪಣೆ ಮಾಡಿದರು.