ಫೋಕ್ಸೋ ಪ್ರಕರಣದಲ್ಲಿ ಬಂಧಿತನಾದ ಆರೋಪಿಗೆ ಜಾಮೀನು

0

ಅಪ್ರಾಪ್ತ ಯುವತಿ ಗರ್ಭವತಿಗೆ ಕಾರಣವಾದ ಆರೋಪಡಿ ಸುಬ್ರಹ್ಮಣ್ಯ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಪುತ್ತೂರು ನ್ಯಾಯಾಲಯ ಜಾಮೀನು ನೀಡಿ ಆದೇಶಿಸಿದೆ.


ಯುವತಿಯು ಗರ್ಭವತಿಯಾಗಿದ್ದಾಳೆ ಎಂಬ ಖಚಿತ ವರ್ತಮಾನದ ಮೇರೆಗೆ ಸುಬ್ರಹ್ಮಣ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ಆಕೆಗೆ 18 ವರ್ಷ ಪೂರ್ಣಗೊಳ್ಳಲಿಲ್ಲ ಎಂಬ ಆಧಾರದಲ್ಲಿ ಕೇನ್ಯ ಗ್ರಾಮದ ಅಶೋಕನನ್ನು ಬಂಧಿಸಿದ್ದರು. ಇದೀಗ ಆರೋಪಿಗೆ ಪುತ್ತೂರಿನ 5ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶರು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶ ನೀಡಿದ್ದಾರೆ.

ಆರೋಪಿಯ ಪರವಾಗಿ ಪುತ್ತೂರಿನ ನ್ಯಾಯವಾದಿಯಾಗಿರುವ ಪ್ರಿಯಾ ಪೈಕ ಹಾಗೂ ಸುಳ್ಯದ ನ್ಯಾಯವಾದಿಗಳಾದ ಜಗದೀಶ್ ಡಿಪಿ ಮತ್ತು ಲಿಖಿತ ಕೆ.ವಿ ಯವರು ವಾದಿಸಿದ್ದರು.