ಬೆಳ್ಳಾರೆಯ ಮಹಿಳಾ ಸೊಸೈಟಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ಲೋಬಲ್ ಸರ್ವಲೆನ್ಸ್ ಸಿ.ಸಿ ಕ್ಯಾಮರಾ ಮಳಿಗೆ ಬೆಳ್ಳಾರೆಯ ಕೆ.ಎಸ್.ಅರ್. ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಅನ್ನಪೂರ್ಣ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಆ. 21ರಂದು ಶುಭಾರಂಭಗೊಂಡಿತು.
ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಹರೀಶ್ ಗೌಡರವರು ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗಿರಥಿ ಮುರುಳ್ಯ, ದ.ಕ.ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೊಲ್ಚಾರ್, ಬೆಳ್ಳಾರೆ ಅಜಪಿಲ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು , ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ ಭಾಗವಹಿಸಿ ಶುಭ ಹಾರೈಸಿದರು.
ಸಂಸ್ಥೆಯ ವತಿಯಿಂದ ಆರಿಕೋಡಿ ಧರ್ಮದರ್ಶಿ ಹರೀಶ್ ಗೌಡರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಗೋಪಣ್ಣ ರೈ, ತಿಮ್ಮಪ್ಪ ಫಾರೆಸ್ಟರ್, ರಮೇಶ್ ಗೌಡ, ಭರತ್ ಗೌಡ ಐವರ್ನಾಡು, ಜಯರಾಮ ಉಮಿಕ್ಕಳ, ರಮನಾಥ ಜಿ. ಅಂಕತಡ್ಕ, ಮಂಜುನಾಥ, ಗಿರೀಶ್ ರೈ, ರಾಕೇಶ್ರವರ ತಾಯಿ ವಿಜಯಲಕ್ಷ್ಮಿ, ಪತ್ನಿ ಶ್ರೀಮತಿ ಅಕ್ಷತಾ, ಸರಸ್ವತಿ, ಅಶೋಕ, ಆಶಾ
ಮೊದಲಾದವರು ಉಪಸ್ಥಿತರಿದ್ದರು.
ಮಾಲಕ ರಾಕೇಶ್ ರೈ ಸರ್ವರನ್ನು ಸ್ವಾಗತಿಸಿದರು. ವಿ. ಜೆ. ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ವರ್ಗ ಸಹಕರಿಸಿದರು.