ಎಣ್ಮೂರು ಕ್ಲಸ್ಟರ್ ಶಾಲೆಗಳ ಪ್ರಾ. ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ

0

ಮುರುಳ್ಯ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸಮಗ್ರ ಪ್ರಶಸ್ತಿ

ದಿನಾಂಕ 23 ರಂದು ಸ. ಹಿ. ಪ್ರಾ. ಶಾಲೆ ಎಡಮಂಗಲ ಇಲ್ಲಿ ನಡೆದ ಎಣ್ಮೂರು ಕ್ಲಸ್ಟರ್ ಶಾಲೆಗಳ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಕಿರಿಯರ ವಿಭಾಗ (1-4 ನೇ ತರಗತಿ) ಹಾಗೂ ಹಿರಿಯರ ವಿಭಾಗ (5-7 ನೇ ತರಗತಿ ) ಎರಡರಲ್ಲೂ ಪ್ರಥಮ ಸಮಗ್ರ ಪ್ರಶಸ್ತಿಯನ್ನು ನಮ್ಮ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಪಡೆದುಕೊಂಡಿದ್ದು; ಸತತ ಎರಡೂ ವರ್ಷಗಳಿಂದ ಈ ಎರಡು ವಿಭಾಗದಲ್ಲೂ ಪ್ರಥಮ ಸಮಗ್ರ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡಿದೆ.


ಕಿರಿಯ ವಿಭಾಗ :
ಮಿಥಿಲ್- ಕನ್ನಡ ಕಂಠಪಾಠ- ಪ್ರಥಮ, ಮುಹಮ್ಮದ್ ಶಹೀಂ-ಇಂಗ್ಲಿಷ್ ಕಂಠಪಾಠ- ಪ್ರಥಮ, ಲಹರಿ-ಕಥೆ ಹೇಳುವುದು- ಪ್ರಥಮ, ಫಾತಿಮತ್ ಸಾನಿಹ-ಚಿತ್ರಕಲೆ- ಪ್ರಥಮ, ಅಝ-ಆಶುಭಾಷಣ- ಪ್ರಥಮ, ತೀಕ್ಷಾ-ಸಂಸ್ಕೃತ ಧಾರ್ಮಿಕ ಪಠಣ-ದ್ವಿತೀಯ ಸ್ಥಾನ


ಹಿರಿಯ ವಿಭಾಗ:
ತನಿಷಾ . ಪಿ-ಪ್ರಬಂಧ ರಚನೆ- ಪ್ರಥಮ, ಶಾನ್ವಿ-ಕಥೆ ಹೇಳುವುದು- ಪ್ರಥಮ, ಆತ್ಮಿಕೆ.ಸಿ-ಚಿತ್ರಕಲೆ- ಪ್ರಥಮ, ಯಶ್ವಿತ್ ಕೆ.ಸಿ- ಮಿಮಿಕ್ರಿ-ಪ್ರಥಮ,ತನಿಷಾ- ಕನ್ನಡ ಕಂಠಪಾಠ- ದ್ವಿತೀಯ, ಪೂರ್ವಜ್-ಇಂಗ್ಲಿಷ್ ಕಂಠಪಾಠ ಮತ್ತು ಸಂಸ್ಕೃತ ಧಾರ್ಮಿಕ ಪಠಣ-ದ್ವಿತೀಯ, ನಂದನ್.ಡಿ.- ಕ್ಲೇ ಮಾಡೆಲಿಂಗ್- ತೃತೀಯ, ಶಾರ್ವಿ-ಆಶುಭಾಷಣ- ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.