ಶ್ರೀಮತಿ ರುಕ್ಮಿಣಿ ವಿಶ್ವನಾಥ ದೇವರಗದ್ದೆ, ನಿಧನ

0

ಸುಬ್ರಹ್ಮಣ್ಯದ ದೇವರಗದ್ದೆ ನಿವಾಸಿ ರುಕ್ಮಿಣಿ ದೇವರಗದ್ದೆ ಆ.27 ರಂದು ಸ್ವಗೃಹದಲ್ಲಿ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ರುಕ್ಮಿಣಿ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಭೋಜನಶಾಲೆಯಲ್ಲಿ ಕೆಲಸದಲ್ಲಿ ತೊಡಗಿಕೊಂಡಿದ್ದು ಸ್ವಯಂ ನಿವೃತ್ತರಾಗಿದ್ದರು. ಮೃತರು ಪತಿ ವಿಶ್ವನಾಥ, ಮಗ ತರಕಾರಿ ವ್ಯಾಪಾರಿ ಜಯಪ್ರಕಾಶ್, ಪುತ್ರಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.