ಸಂಪಾಜೆ ಗ್ರಾಮ ಪಂಚಾಯತ್ ಜಮಾಬಂಧಿ

0

ಸಂಪಾಜೆ ಗ್ರಾಮ ಪಂಚಾಯತ್ ಜಮಾಬಂಧಿಯು ಆ.31ರಂದು ಗ್ರಾ.ಪಂ. ಸಭಾಂಗಣದಲ್ಲಿ ಜರುಗಿತು.

ಜಮಾಬಂಧಿ ಅದಿಕಾರಿಯಾಗಿ ದ.ಕ.‌ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಂ.ಪಿ. ಜ್ಞಾನೇಶ್ ಅವರು ಉಪಸ್ಥಿತರಿದ್ದರು.

ವಿಶೇಷವಾಗಿ ಸಂಪಾಜೆ ಗ್ರಾಮದ ಆದಾಯ ಮೂಲ ಸಂಪನ್ಮೂಲ ಕ್ರೂಡಿಕರಿಸುವಲ್ಲಿ ಗ್ರಾ.ಪಂ. ಯಶಸ್ವೀ ಆಗಿದ್ದು ಜಮಾಬಂಧಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಕಾಮಗಾರಿ ಪರಿಶೀಲನೆ, ಲೆಕ್ಕಪತ್ರ ಪರಿಶೀಲನೆ, ವೀಕ್ಷಣೆಗೆ ಅವಕಾಶಗಳು ಇದ್ದು, ಕಾಮಗಾರಿ ಉತ್ತಮವಾಗಿದೆ ಎಂದು ಜ್ಞಾನೇಶ್ ಅವರು ಹೇಳಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಟಿ.ಎಂ.ಶಹೀದ್ ತೆಕ್ಕಿಲ್, ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಣಿಕಂಠ, ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಶೌಹಾದ್ ಗೂನಡ್ಕ, ಅಬೂಸಾಲಿ ಗೂನಡ್ಕ, ವಿಮಲಾ ಪ್ರಸಾದ್, ಲಿಸ್ಸಿ ಮೊನಾಲಿಸಾ,ಅನುಪಮಾ, ರಜನಿ ಶರತ್ ಮಾಜಿ ಸದಸ್ಯರಾದ ನಾಗೇಶ್, ಸಹಕಾರಿ ಸಂಘದ ನಿರ್ದೇಶಕ ಎಚ್.ಹಮೀದ್, ಶಾಲಾ ಮುಖ್ಯ ಗುರುಗಳು ಊರವರು ಸಿಬ್ಬಂದಿಗಳು ಅಧಿಕಾರಿಗಳು, ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ, ಸಿಬ್ಬಂದಿ ಗೋಪಮ್ಮ ಅವರು ವರದಿ ವಾಚಿಸಿದರು. ಉಪಾಧ್ಯಕ್ಷ ಎಸ್.ಕೆ.ಹನೀಫ್ ವಂದಿಸಿದರು.