ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸೋನಾ ಅಡ್ಕಾರು ಪ್ರಥಮ

0

ಹಾಸನದ ವಿಲ್ ಫವರ್ ಆಫ್ ಯೂತ್ ಚಾರಿಟೇಬಲ್ ಟ್ರಸ್ಟ ,ಡಿಜೆ ಡ್ಯಾನ್ಸ್ ವತಿಯಿಂದ ಏಳನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ನಡೆದ ರಾಜ್ಯಮಟ್ಟದ ಸೋಲೋ ಡ್ಯಾನ್ಸ್ ಸ್ಪರ್ಧೆಯಲ್ಲಿ ಸೋನಾ ಅಡ್ಕಾರು ಅವರು ಭಾಗವಹಿಸಿ, ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಈಕೆ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿದ್ದು, ಜಾಲ್ಸೂರು ಗ್ರಾಮದ ಅಡ್ಕಾರಿನ ಶರತ್ ಹಾಗೂ ಶ್ರೀಮತಿ ಶೋಭಾ ದಂಪತಿಯ ಪುತ್ರಿ.


ಈಕೆಗೆ ಮಂಗಳೂರಿನ ತರುಣ್ ರಾಜ್ ಹಾಗೂ ಸಂತೋಷ್ ಅವರು ನೃತ್ಯ ತರಬೇತಿ ನೀಡಿದ್ದಾರೆ.