ಸಂಪಾಜೆ ಎಜ್ಯುಕೇಶನ್ ಸೊಸೈಟಿಯ ಮಹಾಸಭೆ

0

ಸಂಪಾಜೆ ಎಜ್ಯುಕೇಶನ್ ಸೊಸೈಟಿ ಮಹಾಸಭೆಯು ವಿದ್ಯಾ ಸಂಘದ ಅಧ್ಯಕ್ಷ ರಾಜರಾಮ ಕೀಲಾರು ಅವರ ಅಧ್ಯಕ್ಷತೆಯಲ್ಲಿ ಸೆ.1ರಂದು ನಡೆಯಿತು.

ಸಭೆಯಲ್ಲಿ 2023-24ನೇ ಸಾಲಿನ ಅಂದಾಜು ಆಯವ್ಯಯ ತಖ್ತೆಯು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಆಡಳಿತ ಮಂಡಳಿಯ ಖಜಾಂಜಿ ಬಿ.ಆರ್.ಪದ್ಮಯ್ಯ ಅವರು 2024-25ನೇ ಸಾಲಿನ ಅಂದಾಜು ಆಯ-ವ್ಯಯವನ್ನು ಮಂಡಿಸಿ, ಸರ್ವಾನುಮತದಿಂದ ಮಂಜೂರು ಮಾಡಲಾಯಿತು.

2024-25ನೇ ಸಾಲಿನ ಆಡಳಿತ ಮಂಡಳಿಯ ಮಹಾಸಭೆಗೆ ಗೈರುಹಾಜರಾದ ಸುಬ್ರಹ್ಮಣ್ಯ ಉಪಾಧ್ಯಾಯ. ಪಿ.ಇವರನ್ನು ಹೊರತುಪಡಿಸಿ, ಉಳಿದ ನಿರ್ದೇಶಕರನ್ನು ಪುನರಾಯ್ಕೆ ಮಾಡಲಾಯಿತು. ಗೈರು ಹಾಜರಾತಿ ಕಾರಣದಿಂದ ತೆರವಾದ ಸ್ಥಾನಕ್ಕೆ ಕೆ.ಕೆ.ಶ್ರೀಧರ್ ಅವರನ್ನು ನಿರ್ದೇಶಕರ ಸ್ಥಾನಕ್ಕೆ‌ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

ಎಸ್.ಕೆ. ಮಹಮ್ಮದ್ ಹನೀಫ್ ನಿರ್ದೇಶಕರನ್ನು, ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.


ಅಧ್ಯಕ್ಷ ಕೆ.ಜಿ.ರಾಜಾರಾಮರವರು 2024-25ನೇ ಸಾಲಿನ ಎಲ್ಲಾ ಶೈಕ್ಷಣಿಕ ಚಟುವಟಿಗಳು ಯಶಸ್ವಿಯಾಗಿ ನಡೆಯುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ನಾವೆಲ್ಲರೂ ಶಕ್ತಿಮೀರಿ ದುಡಿಯೋಣ ಎಂದು ಶುಭಹಾರೈಸಿದರು.

ಉಪನ್ಯಾಸಕಿ ಶ್ರೀಮತಿ ಸಾಹಿತ್ಯ ರೈ ಪ್ರಾರ್ಥಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಎಂ. ಶಂಕರನಾರಾಯಣ ಭಟ್ ಅವರು ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲ ಲೋಕ್ಯಾನಾಯ್ಕ್ ಅವರು ವಂದಿಸಿದರು.