ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಸಂಪಾಜೆಯ ಜೇಡ್ಲದಲ್ಲಿರುವ ಪಶುಸಂಗೋಪನಾ ಕೇಂದ್ರಕ್ಕೆ ಭೇಟಿ

0


ಗೋಶಾಲೆ ನಿರ್ವಹಣೆಗೆ ಧನಸಹಾಯ


ಇನ್ನರ್ ವೀಲ್ ಕ್ಲಬ್ ಸುಳ್ಯ ದ ವತಿಯಿಂದ ಗೋವುಗಳ ಕಲ್ಯಾಣಕ್ಕಾಗಿ ಹಣದ ಸಹಾಯ ನೀಡುವುದರ ಮೂಲಕ ಸಹಕಾರವನ್ನು ಒದಗಿಸಲು ಸಂಪಾಜೆಯ ಜೆಡ್ಲಾದಲ್ಲಿರುವ ಗೋಪಾಲ ಕೃಷ್ಣ ದೇವಕಿ ಪಶು ಸಂಗೋಪನ ಕೇಂದ್ರ ವಾಸ್ತವ್ಯಕ್ಕೆ ಭೇಟಿ ಆಯೋಜಿಸಿತು. ಕ್ಲಬ್‌ನ ವತಿಯಿಂದ ಗೋ ಶಾಲೆಯ ನಿರ್ವಹಣೆಗೆ ಹಣಕಾಸಿನ ಸಹಾಯವನ್ನು ನೀಡಲಾಯಿತು.

ಮತ್ತು ದಿನದ ಕಾರ್ಯಕ್ರಮಗಳಲ್ಲಿ ಒಂದಾದ ಗೋ ಪೂಜೆಯನ್ನು ಕ್ಲಬ್ ಅಧ್ಯಕ್ಷೆ ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ ಹಾಗೂ ಸದಸ್ಯೆ ಡಾ. ವೀಣಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಕ್ಲಬ್ ನ ಕಾರ್ಯದರ್ಶಿ ಡಾ. ಸವಿತಾ ಹೊದ್ದೆಟ್ಟಿ ಹಾಗೂ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.