ಸುಳ್ಯ ಗಾಂಧಿನಗರದಲ್ಲಿ ಡಿಕೆ ಸ್ಟುಡಿಯೋ ಮತ್ತು ಸೈಬರ್ ಶುಭಾರಂಭ

0

ಸುಳ್ಯ ಗಾಂಧಿನಗರದ ಡೆಲ್ಮ ಕಾಂಪ್ಲೆಕ್ಸ್ ನಲ್ಲಿ ದೀಕ್ಷಿತ್ ಟಿ.ಮಾಲಕತ್ವದ ಡಿಕೆ ಸ್ಟುಡಿಯೋ ಮತ್ತು ಸೈಬರ್ ಸೆ‌.06 ರಂದು ಶುಭಾರಂಭಗೊಂಡಿತು.
ನಿವೃತ್ತ ಶಿಕ್ಷಕ ಸೋಮಪ್ಪ ಕೆ. ರಿಬ್ಬನ್ ಕತ್ತರಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ವಿಜಯಕುಮಾರ್ ಸೊರಕೆ, ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಕೃಷಿಕರಾದ ಕೃಷ್ಣಪ್ಪ ಗೌಡ ಮುಖ್ಯ ಅತಿಥಿಯಾಗಿದ್ದರು. ದೀಕ್ಷಿತ್ ರವರ ತಂದೆ ರಾಘವೇಂದ್ರ ಗೌಡ, ತಾಯಿ ಮಮತ ,ಸಹೋದರ ರಕ್ಷಿತ್ ಟಿ. ಮೊದಲಾದವರು ಉಪಸ್ಥಿತರಿದ್ದರು.