ಕೋಲ್ಚಾರಿನಲ್ಲಿ 28 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ -ಧಾರ್ಮಿಕ ಸಭೆ ಮತ್ತು ಸನ್ಮಾನ

0

ಅತ್ಯುತ್ತಮ ಕನ್ನಡ ಶಾಲೆ ಪ್ರಶಸ್ತಿ ಪುರಸ್ಕೃತ ಕೋಲ್ಚಾರು ಶಾಲೆಯ ಶಿಕ್ಷಕ ರಕ್ಷಕ ಸಂಘದವರಿಗೆ ಅಭಿನಂದನೆ

ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 28 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು
ಸೆ. 7 ರಂದು ಭಜನಾ ಮಂದಿರದ ವಠಾರದಲ್ಲಿ ಜರುಗಿತು.

ಬೆಳಗ್ಗೆ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ ಗಣಪತಿ ಹವನ ಮತ್ತು ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.
ಬಳಿಕ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆದು ಮಧ್ಯಾಹ್ನ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.

ಧಾರ್ಮಿಕ ಸಭೆ ಮತ್ತು ಸನ್ಮಾನ:

ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಲಿಂಗ ಕಣಕ್ಕೂರು ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆಯು ನಡೆಯಿತು.
ನಿವೃತ್ತ ಮುಖ್ಯ ಶಿಕ್ಷಕರಾದ ರಾಮಪ್ಪ ಮಾಸ್ತರ್ ಕೋಲ್ಚಾರು ದೀಪ ಪ್ರಜ್ವಲಿಸಿದರು.

ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಿದರು. ಪಂಚಾಯತ್ ಸದಸ್ಯೆ ಗೀತಾ ಕೋಲ್ಚಾರು, ಶಂಕರಿ ಕೊಲ್ಲರಮೂಲೆ, ದಿನೇಶ್ ಕಣಕ್ಕೂರು, ಧರ್ಮಪಾಲ ಕೊಯಿಂಗಾಜೆ, ಭಜನಾ ಮಂದಿರದ ಗೌರವಾಧ್ಯಕ್ಷ ಪುರುಷೋತ್ತಮ ಕೋಲ್ಚಾರು,ಅಧ್ಯಕ್ಷ ಆನಂದ ಕುಡೆಂಬಿ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಸುದರ್ಶನ ಪಾತಿಕಲ್ಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭಾರತೀಯ ಭೂಸೇನೆಯಿಂದ ನಿವೃತ್ತರಾದ ಲೆಫ್ಟಿನೆಂಟ್ ಕರ್ನಲ್ ಡಾ. ಕಾರ್ತಿಕ್ ಕಣಕ್ಕೂರು ರವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ರಾಜ್ಯ ಸರಕಾರದ ವತಿಯಿಂದ ಕೊಡಮಾಡಲ್ಪಡುವ 2024-25 ನೇ ವರ್ಷದ ಅತ್ಯುತ್ತಮ ಕನ್ನಡ ಶಾಲೆ ಪ್ರಶಸ್ತಿಗೆ ಭಾಜನರಾದ ಕೋಲ್ಚಾರು ಸರಕಾರಿ ಶಾಲೆಯ ಅಧ್ಯಾಪಕರನ್ನು ಮತ್ತು ಎಸ್.ಡಿ.ಎಂ.ಸಿ ಯವರನ್ನು ಅಭಿನಂದಿಸಲಾಯಿತು.

ಶೈಕ್ಷಣಿಕ ವರ್ಷದಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಗಣೇಶೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧಾಕಾರ್ಯಕ್ರಮವನ್ನು ಆಯೋಜಿಸಿದ್ದು ಬಹುಮಾನ ವಿತರಿಸಲಾಯಿತು. ವಾಮನ ಕೊಯಿಂಗಾಜೆ ಪ್ರಾರ್ಥಿಸಿದರು.
ಪುರುಷೋತ್ತಮ ಕೋಲ್ಚಾರು ಸ್ವಾಗತಿಸಿದರು. ಪ್ರದೀಪ್ ಕೊಲ್ಲರಮೂಲೆ ಬಹುಮಾನ ಪಟ್ಟಿ ವಾಚಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಕಾರ್ಯಕ್ರಮ ನಿರ್ವಹಿಸಿದರು.

ಭಜನಾ ಮಂದಿರದ ಮತ್ತು ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.