ಕೊಲ್ಲಮೊಗ್ರು: ಗಡಿಕಲ್ಲಿನಲ್ಲಿ ರಸ್ತೆ ಬದಿ ಕುಸಿತ

0

ಕಲ್ಮಕಾರಿಗೆ ಘನ ವಾಹನ ಸಂಚಾರ ನಿರ್ಬಂಧ, ರಸ್ತೆ ಸಂಪರ್ಕ ಕಡಿತ ಭೀತಿ

ಕೊಲ್ಲಮೊಗ್ರು – ಕಲ್ಮಕಾರು ಪಿಡಬ್ಲ್ಯೂಡಿ ರಸ್ತೆಯ ಗಡಿಕಲ್ಲು ಎಂಬಲ್ಲಿ ಮುಖ್ಯ ರಸ್ತೆಯ ಬದಿ ಬರೆ ಕುಸಿದು ಬಿದ್ದಿದ್ದು ಕಲ್ಮಕಾರಿಗೆ ಸಂಚಾರ ಸ್ಥಗಿತವಾಗುವ ಭೀತಿ ಬಂದೊದಗಿದೆ.


ಈಗಾಗಲೇ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಕೊಲ್ಲಮೊಗ್ರು ಪಂಚಾಯತ್ ಉಪಾಧ್ಯಕ್ಷ ಅಶ್ವಥ್ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಕಲ್ಮಕಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಮತ್ತಿತರ ಇತರೇ ವಾಹನಗಳ ನಿಷೇಧಿಸಲಾಗಿದೆ. ಇನ್ನಷ್ಟು ಬರೆ ಕುಸಿದರೆ ಕಲ್ಮಕಾರಿನಲ್ಲಿ ಸಂಪೂರ್ಣ ರಸ್ತೆ ಸಂಚಾರವೇ ನಿಂತು ಹೋಗಲಿದೆ ಎಂದು ತಿಳಿದು ಬಂದಿದೆ.