13ವರ್ಷಗಳಿಂದ ಸುಳ್ಯದಲ್ಲಿ ಬ್ಯೂಟಿಶನ್ ವೃತ್ತಿಯನ್ನು ಆರಂಭಿಸಿ ಕಳೆದ 8 ವರ್ಷಗಳಿಂದ ಸುಳ್ಯ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಬ್ಯೂಟಿ ಕಾರ್ನರ್ (ಬ್ಯೂಟಿಪಾರ್ಲರ್ & ಟೈಲರಿಂಗ್ ಸಂಸ್ಥೆ) ನಡೆಸುತ್ತಿದ್ದ ಸೌಮ್ಯ ವಿ ಆರ್ ರವರ ಬ್ಯೂಟಿಪಾರ್ಲರ್ ಮತ್ತು ಟೈಲರಿಂಗ್ ಸ್ಥಳಾಂತರಗೊಂಡು ಸುಳ್ಯದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಸೂಂತೋಡು ಎಂಪೊರಿಯಂ ನಲ್ಲಿ ಐರಾ ಲೇಡೀಸ್ ಬ್ಯೂಟಿಪಾರ್ಲರ್ & ಟೈಲರಿಂಗ್ ಎಂಬ ಹೆಸರಿನಲ್ಲಿ
ಸೆ.6 ರಂದು ಶುಭಾರಂಭಗೊಡಿತು.
ಐರಾ ಬ್ಯೂಟಿಪಾರ್ಲರನ್ನು ಅಖಿಲ ಭಾರತ ಹೇರ್& ಬ್ಯೂಟಿ ಅಸೋಸಿಯೇಷನ್ ಮಂಗಳೂರು ಚಾಪ್ಟರ್ ಅಧ್ಯಕ್ಷೆ ಮರ್ಸಿ ವೀಣಾ ಡಿಸೋಜ ಉದ್ಘಾಟಿಸಿದರು.
ರವಿ ಪ್ರಸಾದ್ ವಿಜಿ ಮತ್ತು ಶ್ರೀಮತಿ ವಿನಯ ದಂಪತಿಗಳು ದೀಪ ಪ್ರಜ್ವಲನೆ ಮಾಡಿದರು.
ಪುತ್ತೂರಿನ ಮೇಕಪ್ ಆರ್ಟಿಸ್ಟ್ ಗಳಾದ ಐಶ್ವರ್ಯ ಚಂದ್ರಶೇಖರ, ಉಷಾ.ಕೆ,ಸುಳ್ಯದ ಬ್ಯೂಟಿಶನ್ ಪ್ರೇಮ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು
ಕು.ಸಾಯಿಶೃತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕು.ಶಿಖ,ಕು.ಲಿಖ ಸತೀಶ್ ನಾಯ್ಕ್ ಸಹಕರಿಸಿದರು.
ಕಳೆದ ಹಲವಾರು ವರ್ಷಗಳಿಂದ ನಮ್ಮ ಹಲವಾರ್ ಗ್ರಾಹಕರು ಬ್ಯೂಟಿಪಾರ್ಲರ್ ಮತ್ತು ಟೈಲರಿಂಗ್ ಸಂಸ್ಥೆಯೊಂದಿಗೆ ಕೈಜೋಡಿಸಿ ತುಂಬಾ ಸಹಾಕರ ನೀಡಿದ್ದಾರೆ. ಇನ್ನುಮುಂದೆಯೂ ಅದೇ ಸಹಕಾರ ನೀಡಬೇಕು ನಾವು ಗ್ರಾಹಕರ ಅನೂಕೂಲಕ್ಕಾಗಿ ಬಸ್ ನಿಲ್ದಾಣ ಮುಂಭಾಗದಲ್ಲಿ ಪ್ರಾರಂಬಿಸಿದ್ದೇವೆ ಎಂದು ಮಾಲಕಿ ಸೌಮ್ಯ ವಿ ಆರ್ ಈ ಸಂದರ್ಭದಲ್ಲಿ ತಿಳಿಸಿದರು.