ಆಲೆಟ್ಟಿ ಗ್ರಾಮದ ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ರಾಜ್ಯ ಮಟ್ಟದ “ಅತ್ಯುತ್ತಮ ಕನ್ನಡ ಶಾಲೆ” ಎಂಬ ರಾಜ್ಯ ಪ್ರಶಸ್ತಿ ಗಳಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮಾಚರಣೆಯನ್ನು ಆಚರಿಸುವ ಕುರಿತು ಪೂರ್ವಭಾವಿ ಸಭೆಯು ಕೋಲ್ಚಾರು ಶಾರದಾಂಬಾ ಸಭಾಭವನದಲ್ಲಿ ಸೆ.7 ರಂದು ನಡೆಸಲಾಯಿತು.
ಸೆ.10 ರಂದು ಸುಳ್ಯದಲ್ಲಿ ಕಾಲ್ನಡಿಗೆಯಲ್ಲಿ ಮೆರವಣಿಗೆ ಸಾಗಿ ಬಂದು ನಾಗಪಟ್ಟಣದಿಂದ ವಾಹನಾ ಜಾಥಾವು ಆಲೆಟ್ಟಿ ಗ್ರಾಮದಲ್ಲಿ ಸಂಚರಿಸಲಿದೆ.
ಬಳಿಕ ಅಭಿನಂದನಾ ಸಮಾರಂಭವು ಶಾಲೆಯ ಸಭಾಭವನದಲ್ಲಿ ನಡೆಸುವುದಾಗಿ ನಿರ್ಧರಿಸಲಾಯಿತು.
ಶಾಲಾಎಸ್.ಡಿ.ಎಂ.ಸಿ.ಅಧ್ಯಕ್ಷ ಸುದರ್ಶನ ಪಾತಿಕಲ್ಲು ಸ್ವಾಗತಿಸಿದರು.
ಶಾಲಾ ಶಿಕ್ಷಕಿ ಜಲಜಾಕ್ಷಿ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸ್ಥಳೀಯ ಪ್ರಮುಖರಾದ ಪುರುಷೋತ್ತಮ ಕೋಲ್ಚಾರು, ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ, ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ, ಶಿಕ್ಷಣ ಇಲಾಖೆಯ ಸಂಯೋಜಕಿ ವೀಣಾ ಸತೀಶ್ ಕೊಯಿಂಗಾಜೆ, ಪಂ.ಸದಸ್ಯರಾದ ದಿನೇಶ್ ಕಣಕ್ಕೂರು, ಗೀತಾ ಕೋಲ್ಚಾರು, ಧರ್ಮಪಾಲ ಕೊಯಿಂಗಾಜೆ, ಶಂಕರಿ ಕೊಲ್ಲರಮೂಲೆ, ಕರುಣಾಕರ ಹಾಸ್ಪಾರೆ, ಮಾಲಿಂಗ ಕಣಕ್ಕೂರು, ಸೀತಾರಾಮ ಕೊಲ್ಲರಮೂಲೆ, ಆನಂದ ಕುಡೆಂಬಿ, ನಿವೃತ್ತ ಮುಖ್ಯ ಶಿಕ್ಷಕಿ ನಾಗವೇಣಿ ಕೊಯಿಂಗಾಜೆ,ರತ್ನಾವತಿ ವಾಲ್ತಾಜೆ ಹಾಗೂ ಶಿಕ್ಷಕ ವೃಂದದವರು, ಎಸ್.ಡಿ.ಎಂ.ಸಿ ಸದಸ್ಯರು, ಸ್ಥಳೀಯ ಊರಿನ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.