ಅಕ್ರಮ ಮಾದಕ ವಸ್ತು ಮಾರಾಟ ಹಾಗೂ ಮಾರಕಸ್ತ್ರ ಬಳಕೆ ಆರೋಪದಡಿ ಬಂಧಿತರಾದ ಆರೋಪಿಗಳಿಗೆ ಹೈಕೋರ್ಟ್ ಜಾಮೀನು

0

ಮಾರಕಸ್ತ್ರ ಗಳನ್ನು ಹೊಂದಿಕೊಂಡು ಅಕ್ರಮವಾಗಿ ಮಾದಕ ವಸ್ತುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಶಿಶಿರ್ ದೇವಾಡಿಗ ಹಾಗೂ ಶುಶನ್ ಎಂಬಾತಾನನ್ನು ಉಳ್ಳಾಲ ಪೊಲೀಸ್ ಮಂಗಳೂರು ಇವರು ಕಾರ್ಯಾಚರಣೆಯ ವೇಳೆ ದಿನಾಂಕ 4/12/2023 ರಂದು ಬಂಧಿಸಿ ಸೆಕ್ಷನ್ 8(c) 21, 21(c) ಮತ್ತು ಮಾರಕಸ್ತ್ರ ಗಳ ಕಾಯಿದೆ 1959 ಸೆಕ್ಷನ್ 4 & 25 1(B) ಹಾಗೂ IPC ಸೆಕ್ಷನ್ 34 ರ ಅಡಿಯಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.


ಮಂಗಳೂರಿನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.


ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ತಿರಸ್ಕರಿಸಿತು.


ಆರೋಪಿಗಳು ಜಾಮೀನು ಅರ್ಜಿ ಕೋರಿ ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ಪುರಸ್ಕರಿಸಿ ಆರೋಪಿಗಳಿಗೆ ಷರತ್ತು ಭದ್ದ ಜಾಮೀನು ನೀಡಿದರು.


ಆರೋಪಿಗಳ ಪರವಾಗಿ ಹೈ ಕೋರ್ಟ್ ನ ನ್ಯಾಯವಾದಿಗಳಾದ ಕರುಣಾಕರ ಪಾಂಬೆಲ್, ಪ್ರದೀಪ್ ಬೊಳ್ಳೂರು, ಶ್ರೀಕಾಂತ್ ಆಚಳ್ಳಿ ಗುತ್ತಿಗಾರು ಹಾಗೂ ಆದರ್ಶ ಗೌಡ ಕಟ್ಟ ಇವರುಗಳು ವಾದ ಮಂಡಿಸಿದರು.