ಸುಳ್ಯದ ನಗರ ಬೀದಿಯಲ್ಲಿ ವೈಭವದ ಶೋಭಾಯಾತ್ರೆ, ಜಲ ಸ್ತಂಭನ
ಹಳೆಗೇಟು ಸಾಂಸ್ಕೃತಿಕ ಸಂಘದ 41ನೇ ವರ್ಷದ ಗಣೇಶೋತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದು ಸೆ. 9 ರಂದು ಸುಳ್ಯ ನಗರ ಬೀದಿಯಲ್ಲಿ ವೈಭವದ ಶೋಭಾಯಾತ್ರೆ ನಡೆದು ಜಲ ಸ್ತಂಭನದೊಂದಿಗೆ ತೆರೆ ಕಂಡಿತು.
ವಿದ್ಯುತ್ ದೀಪಾಲಂಕೃತ ವಾಹನದಲ್ಲಿ,ನಾಸಿಕ್ ಬ್ಯಾಂಡ್, ಪಿಲಿ ನಲಿಕೆ ಹಾಗೂ ಇನ್ನಿತರ ಕಾರ್ಯಕ್ರಮಗಳೊಂದಿಗೆ ಹಳೆಗೇಟು ವಸಂತ ಕಟ್ಟೆ ವಠಾರದಿಂದ ಆರಂಭಗೊಂಡ ಶೋಭಯಾತ್ರೆ ಸುಳ್ಯ ಪೇಟೆಯ ಮೂಲಕ ಶ್ರೀರಾಮ್ ಪೇಟೆ, ಶ್ರೀ ಚೆನ್ನಕೇಶವ ದೇವಸ್ಥಾನ, ವಿವೇಕಾನಂದ ಸರ್ಕಲ್, ಜೆ ಸಿ ರಸ್ತೆ, ಬಳಿಕ ಹಳೆಗೇಟು ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಹೊಸಗದ್ದೆ ಬ್ರಹ್ಮರಗಯ ಬಳಿ ನದಿಯಲ್ಲಿ ರಾತ್ರಿ ಸುಮಾರು 11 ಗಂಟೆಗೆ ಜಲ ಸ್ತಂಭನಗೊಂಡಿತು. ನೂರಾರು ಭಕ್ತರು ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಪೂಜಾ ಕಾರ್ಯಕ್ರಮವನ್ನು ಪುರೋಹಿತ ಬ್ರಹ್ಮಶ್ರೀ ನಾಗರಾಜ್ ಭಟ್ ಹಳೆಗೇಟು ನೆರವೇಸಿದರು.
ಮಧ್ಯಾಹ್ನ ಮಹಾ ಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂಧರ್ಭ ಹಳಗೇಟು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಿ. ಶ್ರೀನಿವಾಸ್ ರಾವ್, ಉಪಾಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಕಾರ್ಯದರ್ಶಿ ಶಿವನಾಥ್ ರಾವ್ ಹಳೆಗೇಟು, ಉಪ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಕೋಶಾಧಿಕಾರಿ ಚಿತ್ತರಂಜನ್, ಹಾಗೂ ಸಮಿತಿಯ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.