ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ, ನವಾನ್ನ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.12ರಂದು ಹೊಸ್ತಾರೋಗಣೆ(ನವಾನ್ನ ಪ್ರಸಾದ) ಕಾರ್ಯಕ್ರಮ ನೆರವೇರಿತು.

ಈ ನಿಮಿತ್ತ ಪ್ರಾತ:ಕಾಲ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ ನಡೆಯಿತು. ಬಳಿಕ ತೆನೆ ತರುವುದು ಹಾಗೂ ಕದಿರು ಪೂಜೆ ನಡೆಯಿತು. ಬಳಿಕ ದೇವಳದ ನೌಕರರಿಗೆ ಮತ್ತು ಸ್ಥಳೀಯ ಭಕ್ತರಿಗೆ ಕದಿರು ವಿತರಣೆ ನಡೆಯಿತು. ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.