ಮೊಗರ್ಪಣೆ ಜುಮ್ಮಾ ಮಸ್ಜಿದ್ ನಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

0

ಮೊಗರ್ಪಣೆ ಜುಮ್ಮಾ ಮಸ್ಜಿದ್ ನಲ್ಲಿ ಪೈಗಂಬರ್ ಮುಹಮ್ಮದ್ ನಬಿಯವರ ಜನ್ಮ ದಿನಾಚರಣೆ ಈದ್ ಮಿಲಾದ್ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಧ್ವಜಾರೋಹಣ ನೆರವೇರಿಸಿದರು.


ಸ್ಥಳೀಯ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿಯವರು ದುವಾ ನೆರವೇರಿಸಿದರು.


ಇದಕ್ಕೂ ಮುನ್ನ ಮುಂಜಾನೆ ಮೌಲೂದ್ ಪಾರಾಯಣ ದುವಾ ಮಜ್ಲಿಸ್ ನಡೆದು ದರ್ಗಾ ಝಿಯಾರತ್ ಪ್ರಾರ್ಥನೆ ನಡೆಯಿತು.

ಈದ್ ಮಿಲಾದ್ ಅಂಗವಾಗಿ ಮಸ್ಜಿದ್ ವಠಾರದಿಂದ ಜ್ಯೋತಿ ವೃತ್ತ ಬಳಿಕ ಹಳೆಗೇಟು ಪೆಟ್ರೋಲ್ ಬಂಕ್ ವರೆಗೆ ಕಾಲ್ನಡಿಗೆ ಜಾಥಾ ನಡೆದು ಜಾಥಾದಲ್ಲಿ ದಫ್ ಪ್ರದರ್ಶನ ಮತ್ತು ಮದರಸ ವಿದ್ಯಾರ್ಥಿಗಳ ಮದ್ಹ್ ಗೀತೆ, ಘೋಷಣೆಗಳು ಆಕರ್ಷಣೆ ಮೆರೆಯಿತು.

ಈ ಸಂಧರ್ಭದಲ್ಲಿ ಜಮಾಅತ್ ಕಮಿಟಿ ಪ್ರ. ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಕೋಶಾಧಿಕಾರಿ ಮಹಮ್ಮದ್ ಆದರ್ಶ, ಕಾರ್ಯದರ್ಶಿ ಎಸ್ ವೈ ಅಬ್ದುಲ್ ರಹಿಮಾನ್, ದ ಕ ಜಿಲ್ಲಾ ವಖ್ಫ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ, ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು,ಹಾಗೂ ಜಮಾಅತ್ ಕಮಿಟಿ ಸದಸ್ಯರು, ಈದ್ ಮಿಲಾದ್ ಸ್ವಾಗತ ಸಮಿತಿ ಅಧ್ಯಕ್ಷ ರಶೀದ್ ಕೆ ವೈ, ಕನ್ವಿನರ್ ಹನೀಫ್ ಪೋಸೂಟ್, ಸರ್ವ ಸದಸ್ಯರು, ಹಳೆ ವಿದ್ಯಾರ್ಥಿಗಳು,ಸ್ಥಳೀಯ ಸಂಘ ಸಂಸ್ಥೆಯ ಅಧ್ಯಕ್ಷ ಸದಸ್ಯರು, ನೂರಾರು ಜಮಾಅತ್ ನಿವಾಸಿಗಳು ಉಪಸ್ಥಿತರಿದ್ದರು.