ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘ ರಚನೆ

0

ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜು ನಿಂತಿಕಲ್ಲು ಇದರ 2024–25ನೇ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕ ಸಂಘದ ರಚನೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.


2024–25ನೇ ಶೈಕ್ಷಣಿಕ ವರ್ಷದ ಅಧ್ಯಕ್ಷರಾಗಿ ಸುದರ್ಶನ ಪಟ್ಟಾಜೆ, ಉಪಾಧ್ಯಕ್ಷರಾಗಿ ಶ್ರೀಮತಿ ಯಮುನಾ ಕಾರ್ಜ ಆಯ್ಕೆ ಗೊಂಡರು. ಸಮಿತಿ ಸದಸ್ಯರಾಗಿ ಮಾಧವ ಕಾಣಿಯೂರು, ಧರ್ಮಪಾಲ ಗೌಡ ಅಂಬುಲ, ಸುಬ್ರಹ್ಮಣ್ಯ ಏನೆಕಲ್ಲು, ರೂಪಾ ಬೆಂಗಳೂರು, ಸುರೇಖಾ ರೈ ಅಡ್ಡ ಬೈಲು, ವಸಂತಿ ತಂಟೆಪ್ಪಾಡಿ ಆಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ಕೆ.ಎಸ್, ಕಾರ್ಯದರ್ಶಿ ಯಾಗಿ ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಆಯ್ಕೆಗೊಂಡರು.


ಭೌತಶಾಸ್ತ್ರ ಉಪನ್ಯಾಸಕರಾದ ಉಜ್ವಲ್ ಕೆ.ಎಚ್ ರಚನಾ ಪ್ರಕ್ರಿಯೆಯನ್ನು ನಡೆಸಿ ಕೊಟ್ಟರು.