ಅರಂಬೂರು: ಇಡ್ಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ರಂಗಮಂದಿರ ಮುಂದಿನ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

0

ಅರಂಬೂರು ಇಡ್ಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ರಂಗ ಮಂದಿರದ ಮುಂದಿನ ಕಾಮಗಾರಿಗೆ ಶೀಲಾನ್ಯಾಸ ಗುದ್ದಲಿ ಪೂಜೆ ಕಾರ್ಯಕ್ರಮ ಸೆ 18 ರಂದು ನಡೆಯಿತು.
ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಈ ರಂಗಮಂದಿರದ ಪ್ರಾರಂಭ ಸುಮಾರು 10 ಲಕ್ಷ ವೆಚ್ಚದಲ್ಲಿ ಸ್ಥಳೀಯ ಊರಿನ ದಾನಿಗಳ ಸಹಕಾರದಿಂದ ಆರಂಭಗೊಂಡಿತ್ತು.

ಅದರ ಮುಂದಿನ ಕಾಮಗಾರಿಗೆ ಕರ್ನಾಟಕ ಸರ್ಕಾರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರೂ 10 ಲಕ್ಷ ಅನುದಾನ ಮಂಜೂರು ಗೊಂಡಿದ್ದು, ಕಾಮಗಾರಿಗಯ ಶಿಲಾನ್ಯಾಸ ಸಮಾರಂಭ ನಡೆಸಲಾಯಿತು.


ಅನುಧಾನ ತರಿಸುವಲ್ಲಿ ಸಹಕರಿಸಿದ ಸ್ಥಳೀಯ ಕಾಂಗ್ರೆಸ್ ಮುಖಂಡ ನ ಪಂ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್ ಅರಂಬೂರು ಶಿಲಾನ್ಯಾಸ ನೆರವೇರಿಸಿದರು.
ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವೀಣಾ ವಸಂತ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್ ಅಧ್ಯಕ್ಷತೆ ವಹಿಸಿದ್ದರು.


ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುಳ್ಯ ವೆಂಕಟ ರಮಣ ಸೊಸೈಟಿ ಅಧ್ಯಕ್ಷ ಪಿ ಸಿ ಜಯರಾಮ್,ಸ್ಥಳೀಯ ಮುಖಂಡರುಗಳಾದ ಶ್ರೀಪತಿ ಭಟ್,ಬಾಪು ಸಾಹೇಬ್,ಕೆ ಗೋಕುಲ್ ದಾಸ್, ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಕೊಲ್ಚಾರ್,ರಂಗ ಮಂದಿರ ಸಮಿತಿ ಅಧ್ಯಕ್ಷ ಚಂದ್ರ ಶೇಖರ ನೆಡ್ಚಿಲ ಮಾತನಾಡಿ ಶುಭಾರೈಸಿದರು.
ಈ ಸಂಧರ್ಭದಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಸತ್ಯ ಕುಮಾರ್ ಆಡಿಂಜ, ಧರ್ಮಪಾಲ ಕೊಯಿಂಗಾಜೆ, ಪುಷ್ಪಾವತಿ ಕುಡೆಕ್ಕಲ್ಲು, ವೇದಾವತಿ ಅರಂಬೂರು, ಸವಿತಾ, ರತೀಶನ್ ಅರಂಬೂರು, ಅನಿತಾ ಇಡ್ಯಡ್ಕ ಹಾಗೂ ಸ್ಥಳೀಯರಾದ ಕುಕ್ಕಪ್ಪ ರೈ, ಅಮ್ಮು ರೈ, ಕೆ ಬಿ ಇಬ್ರಾಹಿಂ, ಬಶೀರ್ ಸಪ್ನಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಅಂಜಿಕ್ಕಾರ್, ಮತ್ತು ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಸ್ಥಳೀಯ ನಿವಾಸಿಗಳು, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯ ಲಕ್ಷ್ಮಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿ ಧೈಹಿಕ ಶಿಕ್ಷಕ ಧನಂಜಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.