ಹಳೆಗೇಟು: ಅಡ್ಕ ನಿವಾಸಿ ಹಸ್ಸನ್ ನಿಧನ

0

ಹಳೆಗೇಟು ಅಡ್ಕ ನಿವಾಸಿ ಹಸ್ಸನ್ ೬೮ ವರ್ಷ ಅಲ್ಪ ಕಾಲದ ಅಸೌಖ್ಯ ದಿಂದ ಸೆ. ೧೯ ರಂದು ಸಂಜೆ ಅಡ್ಕದ ಅವರ ನಿವಾಸದಲ್ಲಿ ನಿಧನರಾದರು.
ಕಳೆದ ಕೆಲವು ದಿನಗಳ ಹಿಂದೆ ಹಳೆಗೇಟು ಬಳಿ ಇವರ ಸ್ಕೂಟಿ ಅಪಘಾತ ಉಂಟಾಗಿದ್ದು, ಕಾಲಿನ ಎಲುಬಿಗೆ ಗಾಯವಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಳಿಕ ಅವರನ್ನು ಅಡ್ಕ ಅವರ ನಿವಾಸಕ್ಕೆ ಕರೆ ತರಲಾಗಿತ್ತು.
ಮೃತರು ಪತ್ನಿ ಜಮೀಲ ಹಾಗೂ ಪುತ್ರರಾದ ಶಾಫಿ, ಇಲ್ಯಾಸ್, ನಿಜಾಮ್,ಶಾಹ್ ಪುತ್ರಿಯರಾದ ಹಸೀನಾ, ಸಮೀನಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.