ಪಂಜ :ಪೋಷಣ್ ಮಾಸಾಚರಣೆ ಕಾರ್ಯಕ್ರಮ

0

ಕರ್ನಾಟಕ ಸರ್ಕಾರ ದ.ಕ ಜಿ.ಪಂ ಸುಳ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಆರೋಗ್ಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪಂಜ, ತುಳಸಿ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಪಂಜ ಇದರ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಸೆ.24 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪಾರ್ವತಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಉದ್ಘಾಟಿಸಿ ಶುಭಹಾರೈಸಿದರು.

ಗೊಂಚಲು ಸಮಿತಿ ಅಧ್ಯಕ್ಷೆ ಶ್ರೀಮತಿ ವೇದಾವತಿ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಿದ್ದರು.

ಪಂಜ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ.ಮಂಜುನಾಥ್ ಸಿ ಆರೋಗ್ಯ ಮಾಹಿತಿ ನೀಡಿದರು. ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ರತ್ನಾವತಿ ಎ ಸ್ವಚ್ಛತೆ ಬಗ್ಗೆ ಪ್ರಮಾಣವಚನ ವಾಚಿಸಿದರು. ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ರವೀಶ್ರೀ ಕೆ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕಗೈದು ಮಾಹಿತಿ ನೀಡಿದರು, ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಟಿ ವಿ ರಾಹೇಲಮ್ಮ , ನಾಗತೀರ್ಥ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೋಷಣ್ ಮಾಸಾಚರಣೆಯ ಪ್ರಯುಕ್ತ ಅನ್ನಪ್ರಶಾನ, ಸೀಮಂತ, ಸಹಾಯಕಿಗೆ ಸನ್ಮಾನ, ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು. ಪೌಷ್ಟಿಕ ಆಹಾರದ ಪ್ರಾತ್ಯಕ್ಷತೆಯನ್ನು ನಡೆಸಿ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ತೀರ್ಥಾ ಕುಮಾರಿ ಕರಿಕ್ಕಳ ಪ್ರಾರ್ಥಿಸಿದರು. ಶ್ರೀಮತಿ ರತ್ನಾವತಿ ಪಾಂಡಿಗದ್ದೆ ಸ್ವಾಗತಿಸಿದರು.ಶ್ರೀಮತಿ ನಿವೇದಿತಾ ಪಂಜ ನಿರೂಪಿಸಿದರು.ಶ್ರೀಮತಿ ದಿವ್ಯ ಸಿ ಯಂ ಅಡ್ಡತ್ತೋಡು ವಂದಿಸಿದರು.

ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಭಾಗಿರತಿ ಪಂಜ, ಶ್ರೀಮತಿ ಲೀಲಾವತಿ ಕರಿಕಳ, ಶ್ರೀಮತಿ ಮಮತ ಅಡ್ಡತ್ತೋಡು, ಶ್ರೀಮತಿ ಸಖಿನಾ ಬಿ ನಾಗತೀರ್ಥ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.