ಅನ್ಸಾರಿಯಾ ಮಾಸಿಕ ಸ್ವಲಾತ್ ಮಜ್ಲಿಸ್

0

ಸೌಹಾರ್ದ ಮತ್ತು ಸರಳ ಜೀವನದ ಪ್ರತೀಕ : ದಿ| ಮುಹಮ್ಮದ್ ಹಾಜಿ ಜನತಾ

ಅನ್ಸಾರಿಯಾ ಎಜುಕೇಶನ್ ಸೆಂಟರ್ ಸುಳ್ಯ ಇದರ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಅನ್ಸಾರಿಯಾ ಸ್ಥಾಪಕಾಧ್ಯಕ್ಷ ದಿ| ಮುಹಮ್ಮದ್ ಹಾಜಿ ಜನತಾ ಹಾಗೂ ಜನತಾ ಮೂಸಾ ಬ್ಯಾರಿ ಅನುಸ್ಮರಣೆ ಕಾರ್ಯಕ್ರಮ ಸೆ.26 ರಂದು ಅನ್ಸಾರಿಯಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಕೆ.ಎಂ ವಹಿಸಿದರು.

ಸಯ್ಯದ್ ಪಝಲ್ ಸೀದಿ ಅಲ್ ಹೈದ್ರೊಸಿ ಬಲಮುರಿ ತಂಙಳ್ ಸ್ವಲಾತ್ ಮಜ್ಲಿಸ್ ನೇತ್ರತ್ವ ವಹಿಸಿ ದುವಾಶಿರ್ವಚನ ಮಾಡಿದರು.
ಅನ್ಸಾರಿಯಾ ದಅವಾ ಕಾಲೇಜು ಮುದರ್ರಿಸ್ ಹಾಪಿಳ್ ಕಬೀರ್ ಹಿಮಮಿ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.

ಅನ್ಸಾರಿಯಾ ದಅವಾ ಕಾಲೇಜು ಮುದರ್ರಿಸ್ ಅಬೂಬಕ್ಕರ್ ಹಿಮಮಿ ಸಖಾಫಿ ಅನ್ಸಾರಿಯಾ ಸ್ವಲಾತ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ” ದಿ|ಮುಹಮ್ಮದ್ ಹಾಜಿ ಜನತಾ ರವರು ಅನ್ಸಾರಿಯಾ ಸ್ಥಾಪಕರಾಗಿ ಸುದೀರ್ಘ ಕಾಲ ಅಧ್ಯಕ್ಷರಾಗಿ ಅನ್ಸಾರಿಯಾವನ್ನು ಮುನ್ನಡೆಸಿ ಅನ್ಸಾರಿಯಾ ಅಭಿವೃದ್ಧಿಯಾಗುವುದಕ್ಕೆ ಸಹಕಾರಿಯಾಗಿದ್ದ ಮಹಾ ಚೇತನ,ಅವರು ಸರಳ ಮತ್ತು ಸೌಹಾರ್ದ ಜೀವನಕ್ಕೆ ಮಾದರಿಯಾಗಿದ್ದರು ಎಂದು ಅನುಸ್ಮರಣೆ ಪ್ರಭಾಷಣದಲ್ಲಿ ಹೇಳಿದರು.


ಕಾರ್ಯಕ್ರಮದಲ್ಲಿ ದಅವಾ ಕಾಲೇಜು ವಿದ್ಯಾರ್ಥಿ ಸಂಘಟನೆಯು ತಿಂಗಳಿಗೆ ಹೊರತರುತ್ತಿರುವ ಕೈಬರಹ ಮಾಸಿಕ ದ ಇಂಗ್ಲೀಷ್ ಮ್ಯಾಗಝಿನ್ ಸಯ್ಯಿದ್ ರವರು ಜಮಾಅತ್ ಅಧ್ಯಕ್ಷರಿಗೆ ನೀಡಿ ಪ್ರಕಾಶನಗೊಳಿಸಿದರು.


ವೇದಿಕೆಯಲ್ಲಿ ಸಯ್ಯಿದ್ ತ್ವಾಹಿರ್ ತಂಙಳ್ ಸಅದಿ ಸುಳ್ಯ,ಅನ್ಸಾರ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್, ಗಾಂಧಿನಗರ ಜಮಾಅತ್ ಅಧ್ಯಕ್ಷ ಹಾಜಿ ಮುಹಮ್ಮದ್ ಕೆ.ಎಂ.ಎಸ್ , ಅನ್ಸಾರಿಯಾ ಸಲಹೆಗಾರರಾದ ಇಕ್ಬಾಲ್ ಎಲಿಮಲೆ,ಅನ್ಸಾರಿಯಾ ಉಪಾಧ್ಯಕ್ಷ ಎಸ್ ಪಿ ಅಬೂಬಕ್ಕರ್, ಗಾಂಧಿನಗರ ಜಮಾಯತ್ ಕಮಿಟಿ ಉಪಾಧ್ಯಕ್ಷ ಹಮೀದ್ ಬೀಜಕೊಚ್ಚಿ , ಕೋಶಾಧಿಕಾರಿ ಹಾಜಿ ಮುಹ್ಯದ್ದೀನ್ ಫ್ಯಾನ್ಸಿ,,ಅನ್ಸಾರಿಯಾ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಅನ್ಸಾರಿಯಾ ನಿರ್ದೇಶಕರುಗಳಾದ ಹಮೀದ್ ಹಾಜಿ ಜನತಾ,ಹಾಜಿ ಅಬ್ದುಲ್ ಗಫ್ಫಾರ್,ಉಮರ್ ಕೆ‌.ಎಸ್,ಸಿದ್ದೀಕ್ ಕೊಕ್ಕೋ,ಸಿದ್ದೀಕ್ ಕಟ್ಟೆಕ್ಕಾರ್,ಉಮರ್ ಕೊಲ್ಚಾರ್,ಶರೀಫ್ ಜಟ್ಟಿಪಳ್ಳ ಮುಂತಾದವರು ಉಪಸ್ಥಿತರಿದ್ದರು.