ಕೆವಿಜಿ ಪಾಲಿಟೆಕ್ನಿಕ್ : ಸಾಂಪ್ರದಾಯಿಕ ದಿನಾಚರಣೆ

0

ಸುಳ್ಯದ ಕುರುಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನಲ್ಲಿ ಸಾಂಪ್ರದಾಯಿಕ ದಿನಾಚರಣೆ ನಡೆಯಿತು.

ವಿದ್ಯಾರ್ಥಿಗಳು ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಉಡುಗೆ ತೊಡುಗುಗಳೊಂದಿಗೆ ಸಂಭ್ರಮಿಸಿದರು.


ಜೊತೆಗೆ ಸಮೂಹ ಗೀತೆ, ಸಮೂಹ ನ್ರತ್ಯ, ಛದ್ಮವೇಷ, ರಂಗೋಲಿ ಬೆಂಕಿರಹಿತ ಅಡಿಗೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಿದರು.


ಕಾಲೇಜಿನ ಪ್ರಾಂಶುಪಾಲ ಶ್ರೀಧರ ಎಂ ಕೆ, ಉಪ ಪ್ರಾಂಶುಪಾಲ ಅಣ್ಣಯ್ಯ ಕೆ. ಎಲ್ಲಾ ವಿಭಾಗಗಳ ಮುಖ್ಯಸ್ಥರು ಭೋದಕ, ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಸಹಕಾರ ನೀಡಿದರು.