ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ರಮೇಶ್ ಕೋಟೆ ಆಯ್ಕೆ

0

ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ನ (KSCA) ಉಪಾಧ್ಯಕ್ಷರಾಗಿ 2024-27ರ ಅವಧಿಗೆ ರಮೇಶ್ ಕೋಟೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ರಮೇಶ್ ಕೋಟೆ ಅವರು ಇದೀಗ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದ ಕ ಜಿಲ್ಲೆಯಲ್ಲಿ ಈಗಾಗಲೇ ಹಲವು ಚೆಸ್ ಸ್ಪರ್ಧೆಯನ್ನು ಆಯೋಜನೆ ಮಾಡುವ ಮೂಲಕ ರಮೇಶ್ ಕೋಟೆ ಅವರು ಜಿಲ್ಲೆಯಲ್ಲಿ ಚೆಸ್ ಆಸಕ್ತರಿಗೆ ವೇದಿಕೆಯನ್ನು ಕಲ್ಪಿಸಿದ್ದಾರೆ.