ಶತಾಯುಷಿ ಶೇಷಮ್ಮ ಸೇರ್ಕಜೆ ಮೋಂಟಡ್ಕ ನಿಧನ

0


ಸುಳ್ಯ ಕಸಬಾ ಗ್ರಾಮದ ಸೇರ್ಕಜೆ ಮೋಂಟಡ್ಕ ದಿ. ತಿಮ್ಮಪ್ಪ ಗೌಡರ ಧರ್ಮಪತ್ನಿ ಶೇಷಮ್ಮ ಸೇರ್ಕಜೆ ಮೋಂಟಡ್ಕರವರು ಇಂದು ಬೆಳಿಗ್ಗೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.


ಅವರಿಗೆ 100 ವರ್ಷ ವಯಸ್ಸಾಗಿತ್ತು.

ಪುತ್ತೂರು ತಾಲೂಕಿನ ಕಕ್ಕೆಬೆಟ್ಟು ಶಾಲೆಯಲ್ಲಿ ಇವರು ೪ನೇ ತರಗತಿಯಲ್ಲಿದ್ದಾಗ ಇಲ್ಲಿಗೆ ಮಹಾತ್ಮಾ ಗಾಂಧೀಜಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಇವರು ಪ್ರಾರ್ಥನೆಯನ್ನು ಹಾಡಿದ್ದರು.


ಮೃತರು ಮಕ್ಕಳಾದ ವಾಸುದೇವ ಸೇರ್ಕಜೆ, ಕರುಣಾಕರ ಸೇರ್ಕಜೆ, ಶ್ರೀಮತಿ ಗಿರಿಜಾ ಮುರೂರು, ಶ್ರೀಮತಿ ಶಾರದಾ ವೆಂಕಪ್ಪ ಮಳುವೇಲು, ಬಾಲಚಂದ್ರ ಸೇರ್ಕಜೆ, ದಿವಾಕರ ಸೇರ್ಕಜೆ, ಬಾಲಗೋಪಾಲ ಸೇರ್ಕಜೆ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.