ಪ್ರತ್ಯಕ್ಷ ಮೊಗ್ರ ಅವರಿಗೆ ಚಿನ್ನದ ಪದಕ

0

ಬಾಗಲಕೋಟೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 13 ನೇ ಘಟಿಕೋತ್ಸವದಲ್ಲಿ ಶಿರಸಿಯ ತೋಟಗಾರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರತ್ಯಕ್ಷ ಮೊಗ್ರ ಇವರಿಗೆ ಚಿನ್ನದ ಪದಕ ದೊರೆತಿರುತ್ತದೆ.

ಇವರು ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗು ಮುಡಿಪುವಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರೌಢ ಶಿಕ್ಷಣವನ್ನು ಮಾಡಿದ್ದು, ಪುತ್ತೂರಿನ ಅಂಬಿಕ ಪದವಿಪೂರ್ವ ವಿದ್ಯಾಲಯದಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಬೆಂಗಳೂರಿನ ತೋಟಗಾರಿಕ ಮಹಾವಿದ್ಯಾಲಯದಲ್ಲಿ ಪುಷ್ಪ ವಿಜ್ಞಾನದಲ್ಲಿ ( Floriculture and Landscaping) ಸ್ನಾತಕೋತ್ತರ ಪದವಿ ( M. Sc) ಮಾಡುತ್ತಿದ್ದಾರೆ.

ಪ್ರತ್ಯಕ್ಷ ಅವರು ದೊಡ್ಡ ತೋಟ ಸಂಕೇಶ ನಿವಾಸಿ, ಚೊಕ್ಕಾಡಿ ಕುಕುಜಡ್ಕ ಸಹಕಾರಿ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಎನ್. ವಾಸುದೇವ ಮೊಗ್ರ ಹಾಗು ಶಿಕ್ಷಕಿ ಉಷಾ. ಕೆ ಇವರ ದ್ವಿತೀಯ ಪುತ್ರಿ.