ಕೇರ್ಪಡ ಶ್ರೀಮಹಿಷಮರ್ದಿನಿ ದೇವಸ್ಥಾನಕ್ಕೆ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧಿರಜ್ ಮುನಿರಾಜ್ ಅ. 4 ರಂದು ಭೇಟಿ ನೀಡಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲ್ ಕ್ಷೇತ್ರದ ವತಿಯಿಂದ ಗೌರವಿಸಿದರು.
ಅರ್ಚಕ ಶ್ರೀ ಹರಿ ಕುಂಜೂರಾಯರು ಪ್ರಸಾದ ನೀಡಿದರು.
ಶಾಸಕಿ ಭಾಗಿರಥಿ ಮುರುಳ್ಯ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ವ್ಯ. ಸ. ಸದಸ್ಯರಾದ ವೆಂಕಪ್ಪ ಗೌಡ ಆಲಾಜೇ, ರೂಪರಾಜ ರೈ, ಯೋಗಾನಂದ ಉಲ್ಲೇಲಾಡಿ, ಭಾಗ್ಯಪ್ರಸನ್ನ, ವಾರಿಜಾಕ್ಷಿ, ರಘುನಾಥ್ ಎಂಜೀರ್, ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ನಾಗಮಜಲು, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಗುಣವತಿ ನಾವೂರ್ ಹಾಗೂ ರಾಜೇಂದ್ರ ಪ್ರಸಾದ್ ಶೆಟ್ಟಿ, ದ್ರುವಕುಮಾರ್, ಆನಂದ ಗೌಡ ಆರೆಂಬಿ ಇನ್ನಿತರರು ಉಪಸ್ಥಿತರಿದ್ದರು. (ವರದಿ : ASS)