ಸುಳ್ಯ: ಕೆ.ವಿ.ಜಿ. ಆಯುರ್ವೇದ ಕಾಲೇಜು ಬಳಿ ಇನ್ ಸ್ಟೈಲ್ ಟೈಲರಿಂಗ್ & ಎಂಬ್ರಾಯಿಡರಿ ಸಂಸ್ಥೆ ವಿಸ್ತೃತಗೊಂಡು ಶುಭಾರಂಭ

0

ಕಳೆದ 8 ವರ್ಷಗಳಿಂದ ಸುಳ್ಯದ ಕೆ.ವಿ.ಜಿ. ಆಯುರ್ವೇದ ಕಾಲೇಜು ಬಳಿಯ ಅಕ್ಷಯ ಆರ್ಕೇಡ್ ನಲ್ಲಿ ಶ್ರೀಮತಿ ಅನಿತಾ ಕೆ ಮಾಲಕತ್ವದ ಇನ್ ಸ್ಟೈಲ್ ಎಂಬ್ರಾಯಿಡರಿ ಮತ್ತು ಲೇಡೀಸ್ ಟೈಲರಿಂಗ್ ಸಂಸ್ಥೆ ವಿಸ್ತೃತಗೊಂಡು ಅ. 11ರಂದು ಶುಭಾರಂಭಗೊಂಡಿತು.

ಬೆಳಿಗ್ಗೆ ನಟರಾಜ ಭಟ್ ಗಣಪತಿ ಹವನ, ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ವಾರಿಜ, ಕು. ಅರ್ಪಿತಾ, ಶಿವಪ್ರಸಾದ್, ದಯಾನಂದ, ಸವಿತಾ, ನಾಗರಾಜ್, ಶ್ರೀಮತಿ ಕವಿತಾ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಶ್ರೀಮತಿ ಅನಿತಾ ಕೆ ಮತ್ತು ಅನಿಶ್ ಅತಿಥಿಗಳನ್ನು ಸ್ವಾಗತಿಸಿದರು. ಇನ್ ಸ್ಟೈಲ್ ಸಂಸ್ಥೆಯಲ್ಲಿ ಲೇಡೀಸ್ ಟೈಲರಿಂಗ್, ಎಂಬ್ರಾಯಿಡರಿ (ಹ್ಯಾಂಡ್ ವರ್ಕ್ ಮತ್ತು ಮೆಶಿನ್ ವರ್ಕ್) ಕೆಲಸವನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದೆಂದು ಮಾಲಕರಾದ ಶ್ರೀಮತಿ ಅನಿತಾ ಕೆ ತಿಳಿಸಿದ್ದಾರೆ.