ಪಂಜ ಜೇಸಿ ಸಪ್ತಾಹ -2024

0

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ 2024 ರ ಅಂಗವಾಗಿ ಮುಕ್ತ ಚಿತ್ರಕಲಾ ಮತ್ತು ಕೇರಂ ಸ್ಪರ್ಧೆ ಅ.17 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಮುಕ್ತ ಚಿತ್ರಕಲಾ ಸ್ಪರ್ಧೆಯನ್ನು ಚಿತ್ರಕಲಾ ಶಿಕ್ಷಕಿ ಶ್ರೀಮತಿ ಶಮಿತಾ ಪಿ ರೈ ಬೆಳ್ಳಾರೆ ರವರು ಉದ್ಘಾಟಿಸಿ ಶುಭಹಾರೈಸಿದರು.

ಕೇರಂ ಸ್ಪರ್ಧೆಯನ್ನು ನಿವೃತ್ತ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಧವ ಬಿ ಕೆ ಉದ್ಘಾಟಿಸಿ ಶುಭ ಹಾರೈಸಿದರು.

ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ ವಹಿಸಿದ್ದರು. ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಯರಾಮ ಕಲ್ಲಾಜೆ ವೇದಿಕೆಗೆ ಆಹ್ವಾನಿಸಿದರು. ಜೀವನ್ ಮಲ್ಕಜೆ ಸ್ವಾಗತಿಸಿದರು.ನಾಗಮಣಿ ಕೆದಿಲ ಜೇಸಿ ವಾಣಿ ನುಡಿದರು. ಕೌಶಿಕ್ ಕುಳ ಅತಿಥಿಗಳನ್ನು ಪರಿಚಯಿಸಿದರು. ಜೀವನ್ ಶೆಟ್ಟಿಗದ್ದೆ ವಂದಿಸಿದರು.

ಅ.18 ರಂದು ಸಂಜೆ ಗಂಟೆ 6.30 ರಿಂದ ಪಂಜ ಲಯನ್ಸ್ ಭವನದಲ್ಲಿ ಕೌಟುಂಬಿಕ ತರಬೇತಿ ಕಾರ್ಯಗಾರ ನಡೆಯಲಿದೆ.

ಅ.19 ರಂದು ಸಂಜೆ ಗಂಟೆ 7 ರಿಂದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬೆಳ್ಳಾರೆ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ ಪಿ ಉಮೇಶ್ ಪಾಲ್ಗೊಳ್ಳಲಿದ್ದಾರೆ. ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ವಾಸುದೇವ ಮೇಲ್ಪಾಡಿ ರವರಿಗೆ ಕಮಲ ಪತ್ರ ಪುರಸ್ಕಾರ ನಡೆಯಲಿದೆ.

ಜೇಸಿಐ ಪೂರ್ವ ವಲಯಾಧ್ಯಕ್ಷ ಪುರಂದರ ರೈ ಪರಸ್ಕರಿಸುವವರು. ಅಂತರಾಷ್ಟ್ರೀಯ ಈಜು ಪಟು ದಿಗಂತ್ ವಿ ಎಸ್, ಮೈಸೂರು ವಿಶ್ವವಿದ್ಯಾನಿಲಯದ ರ್‍ಯಾಂಕ್ ವಿಜೇತೆ ಪ್ರಜ್ಞಾ ಎ ಡಿಸೋಜ, ಉದಯೋನ್ಮುಖ ಯಕ್ಷಗಾನ ಭಾಗವತ ರಚನಾ ಚಿದ್ಗಲ್ ರವರು ಸನ್ಮಾನ ಸ್ವೀಕರಿಸಲಿದ್ದಾರೆ. ಪಂಚಶ್ರೀ ವಿದ್ಯಾನಿಧಿ ಸಮರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಸಂಭ್ರಮದಲ್ಲಿ ಡ್ಯಾನ್ಸ್ ಮತ್ತು ಬೀಟ್ಸ್ ಮತ್ತು ಸಂಸ್ಥೆ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ, ಲಕುಮಿ ತಂಡದ ಕುಸಾಲ್ದ ಕಲಾವಿದರ್ ಅಭಿನಯಿಸುವ ಅರವಿಂದ್ ಬೋಳಾರ್ ವಿಭಿನ್ನ ಪಾತ್ರದ ತುಳು ಹಾಸ್ಯಮಯ ನಾಟಕ ಒರಿಯಾಂಡಲಾ ಸರಿಬೋಡು ಪ್ರದರ್ಶನಗೊಳ್ಳಲಿದೆ.