ಅರಮನೆಗಯ ತೂಗು ಸೇತುವೆ ಅವಘಡಕ್ಕೆ ಅಧಿಕಾರಿಗಳ, ಜನಪ್ರತಿನಿಧಿನಗಳ ನಿರ್ಲಕ್ಷ್ಯವೇ ಕಾರಣ

0

ಅಂಬೇಡ್ಕರ್ ರಕ್ಷಣಾ ವೇದಿಕೆ ಆರೋಪ: ತಕ್ಷಣವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಮನವಿ

ಇಲ್ಲದಿದ್ದಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆಯ ಎಚ್ಚರಿಕೆ

ಸುಳ್ಯ ತಾಲೂಕು ಅರಂತೋಡು ಗ್ರಾಮದ ಅರಮನೆಗಯ ಸಂಪರ್ಕದ ತೂಗು ಸೇತುವೆ ಅವಘಡ ಸಂಭವಿಸಲು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಆರೋಪಿಸಿದೆ.


ಸೇತುವೆಯನ್ನು ಕೊಡಲೇ ತಾತ್ಕಾಲಿಕ ದುರಸ್ಥಿ ಪಡಿಸಿ ಕೊಡಬೇಕು ಮತ್ತು ಶಾಶ್ವತ ಸೇತುವೆಯ ಯೋಜನೆ ನೀಡಬೇಕು. ಇಲ್ಲದಿದ್ದರೆ ಸುಳ್ಯ ತಾಲೂಕು ಕಚೇರಿ ಮುಂಭಾಗ ಉಗ್ರ ಪ್ರತಿಭಟನೆಯನ್ನು ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಕಳೆದ ೩೦ ವರ್ಷಗಳಿಂದ ಸಂಬಂಧಪಟ್ಟ ಶಾಸಕರಿಗೆ ಮತ್ತು ಸಂಬಂಧ ಪಟ್ಟ ಎಲ್ಲಾ ಅಧಿಕಾರಿ ವರ್ಗದವರಿಗೂ ಶಾಶ್ವತವಾಗಿ ಇಲ್ಲಿಗೆ ಹೊಸ ಸೇತುವೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದ್ದೆವು.


ಆದರೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಯಾವುದೇ ರೀತಿಯಲ್ಲಿ ಇದುವರೆಗೆ ಸ್ಪಂದಿಸಿಲ್ಲ ತೂಗು ಸೇತುವೆಯ ರಿಪೇರಿಯನ್ನು ಕೂಡ ಗ್ರಾಮ ಪಂಚಾಯಿತಿ ನವರು ಮಾಡಿಕೊಟ್ಟಿರುವುದಿಲ್ಲ.

ಇಲ್ಲಿ ಸುಮಾರು ೬೦ ದಲಿತ ಕುಟುಂಬಗಳು ವಾಸವಾಗಿರುತ್ತಾರೆ ಶಾಲಾ ಮಕ್ಕಳು ಶಾಲೆಗೆ ಇದೇ ಸೇತುವೆಯಲ್ಲಿ ನಿರಂತರವಾಗಿ ಓಡಾಡಬೇಕಾಗುತ್ತದೆ ಆದರೆ ಇದೆಲ್ಲ ಗೊತ್ತಿದ್ದರೂ ಶಾಸಕರಾಗಲಿ ಅಧಿಕಾರಿಗಳಾಗಲಿ ಯಾವುದೇ ಕ್ರಮ ಇದುವರೆಗೆ ಕೈಗೊಂಡಿಲ್ಲ. ಇದೀಗ ಅ ೧೭ ರಂದು ರಾತ್ರಿ ತೂಗು ಸೇತುವೆಯ ಮೇಲೆ ಸ್ಥಳೀಯ ಮೂವರು ನಿವಾಸಿಗಳು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಸೇತುವೆಯ ರೋಪ್ ಕಟ್ಟಾಗಿ ಕೆಳಗಡೆ ಬಿದ್ದ ಪರಿಣಾಮ ಅವರನ್ನು ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು ಇದಕ್ಕೆಲ್ಲ ನೇರ ಹೊಣೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷವೇ ಕಾರಣ.

ಆದ್ದರಿಂದ ಈ ತೂಗು ಸೇತುವೆಯಲ್ಲಿ ದಿನನಿತ್ಯ ಶಾಲಾ ಮಕ್ಕಳು ಕೂಲಿ ಕಾರ್ಮಿಕರು ಬೇರೆ ರಸ್ತೆ ಇಲ್ಲದೆ ಇದೆ ತೂಗು ಸೇತುವೆಯಲ್ಲಿ ಓಡಾಡಬೇಕಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸಿ ಈ ತೂಗು ಸೇತುವೆಯನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಿ ಕೊಡಬೇಕಾಗಿಯೂ ಮತ್ತು ಕೂಡಲೇ ಶಾಶ್ವತವಾಗಿ ಹೊಸ ಸೇತುವೆ ನಿರ್ಮಿಸಿ ಕೊಡಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಕೇಳಿಕೊಳ್ಳುತ್ತಿದ್ದೇವೆ.

ಒಂದು ವೇಳೆ ರಿಪೇರಿ ಮಾಡದೇ ಇದ್ದಲ್ಲಿ ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಸಂಧರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ, ಸುಳ್ಯ ತಾಲೂಕು ಅಧ್ಯಕ್ಷರು ರಮೇಶ ಕೊಡಂಕೇರಿ,ಕಾರ್ಯದರ್ಶಿ ತೇಜಕುಮಾರ್ ಅರಮನೆ ಗಯ ಅರಂತೋಡು ಘಟಕ ಅಧ್ಯಕ್ಷ ನವೀನ ಕಲ್ಲುಗುಡ್ಡೆ ಚಂದ್ರಶೇಖರ, ಕುಸುಮಾದರ,ಬಾಲಕೃಷ್ಣ, ಲೋಕೇಶ್ ಕಿಟ್ಟು ಮೊದಲಾದವರು ಉಪಸ್ಥಿತರಿದ್ದರು.