ಸುಬ್ರಹ್ಮಣ್ಯದಲ್ಲಿ ವಿಶ್ವ ಪೋಲಿಯೋ ದಿನಾಚರಣೆಯ ಅಂಗವಾಗಿ ಅ.24 ರಂದು ವಿಶ್ವ ಪೋಲಿಯೋ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ
ಇಡೀ ವಿಶ್ವದಲ್ಲಿ ಪೋಲಿಯೋವನ್ನ ಮುಕ್ತವನ್ನಾಗಿಸಲು ರೋಟರಿ ಕ್ಲಬ್ ಶ್ರಮ ವಹಿಸಿದ್ದನ್ನು ನಾವಿಲ್ಲಿ ನೆನಪಿಸಲೇಬೇಕು. ಭಾರತ ಪೋಲಿಯೋ ಮುಕ್ತ ದೇಶವಾಗಿದೆ. ಯಾವೊಂದು ಕೇಸುಗಳು 2014 ರಿಂದ ಬಂದಿರುವುದಿಲ್ಲ. ಪೋಲಿಯೋ ನಿರ್ಮೂಲನೆಗೊಳಿಸಲು ವ್ಯಾಕ್ಸಿನ್ ಹಾಕುವಲ್ಲಿ ಹಾಗೂ ಮಾಹಿತಿಗಳನ್ನು ನೀಡುವಲ್ಲಿ ಸಂಘ ಸಂಸ್ಥೆಗಳ ,ಆರೋಗ್ಯ ಕಾರ್ಯಕರ್ತರ ,ಆರೋಗ್ಯ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯ. ರಾಷ್ಟ್ರೀಯ ಅಂತರಾಷ್ಟ್ರೀಯ ಪೋಲಿಯೋ ದಿನಾಚರಣೆಯನ್ನು ಆಚರಿಸುವುದರೊಂದಿಗೆ ಇದರ ಉದ್ದೇಶ ವನ್ನು ಸಾರ್ವಜನಿಕರಿಗೆ ತಿಳಿಸುವುದರೊಂದಿಗೆ ಜಾಗೃತಿಯನ್ನು ಮೂಡಿಸುವಂತಾಗಬೇಕು ಎಂದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ಆಯೋಜಿಸಿದ್ದ ವಿಶ್ವ ಪೋಲಿಯೋ ದಿನಾಚರಣೆ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. ಈ ಸಂದರ್ಭದಲ್ಲಿ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಡೆಪ್ಯೂಟಿ ರೇಂಜರ್ ಮನೋಜ್ . ಅಶೋಕ್ ಕುಮಾರ್ ,ದಿನೇಶ್ ಎಣ್ಣೆ ಮಜಲ್ ಹಾಗೂ ಆರೋಗ್ಯ ಹಿರಿಯ, ಕಿರಿಯ ,ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿ, ಸಹಾಯಕರು ಉಪಸಿತರಿದ್ದರು.