ಅಮರಮುಡ್ನೂರು ಗ್ರಾಮದ ಹಿರಿಯಡ್ಕ ದಿ.ಜತ್ತಪ್ಪ ಗೌಡ ರವರ ಪುತ್ರ ಹರೀಶ್ ಹಿರಿಯಡ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.26 ರಂದು ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಯಶೋಧ ಹಾಗೂ ಓರ್ವ ಪುತ್ರ ಮತ್ತು ಸಹೋದರ ಹಾಗೂಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಕುಕ್ಕುಜಡ್ಕ ಶ್ರೀ ಮಹಾವಿಷ್ಣು ಯಕ್ಷಗಾನ ಮಂಡಳಿಯ ಸದಸ್ಯರಾಗಿ, ಯುವಕ ಮಂಡಲದ ಅಧ್ಯಕ್ಷರಾಗಿ, ಗಣೇಶೋತ್ಸವ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕಳೆದ ಹತ್ತು ವರ್ಷಗಳಿಂದ ಪುತ್ತೂರಿನಲ್ಲಿ ವಾಸವಾಗಿದ್ದರು.