ಮಜ್ಜನವ ಮಾಡಿರಲು
ಸಜ್ಜನರು ಸೇರಿರಲು
ಸಂಭ್ರಮದ ಸಡಗರವ
ನಾನು ಕಂಡೆ||
ಸದ್ದು ಗದ್ದಲದೆಡೆಗೆ
ಆಕಾಶಬುಟ್ಟಿ ಒಂದೆಡೆಗೆ
ದೀಪಗಳು ಮೇಳೈಪ
ಜಗವ ಕಂಡೆ||
ಪುಟಿದೇಳ್ವಸಿಡಿಮದ್ದು
ಹೊನ್ನ ಹಕ್ಕಿಗಳಂತೆ
ಜಯ ಘೋಷ ಎಲ್ಲೆಡೆಯು
ಸವಿಯೂಟವಂತೆ||
ಅಜ್ಜಿ ತಾತನು ಪೇಳ್ವ
ಕಥೆಯ ಸುರಿಮಳೆಯೆಂತೊ
ಲಕ್ಷ್ಮಿ ಪೂಜೆಯ ಜೊತೆಗೆ
ಮೇಳೈಪ ಗೋಪೂಜೆಯಂತು||
ತಳಿರು ತೋರಣ ಸೊಬಗು
ಬಲಿಯಾಗಮನದ ಬುರುಗು
ಸಂತಸದ ಹೂವ ನಗು
ಅದೇ ದೀಪಾವಳಿಯ ಸೊಬಗು||